ಕಾಂಗ್ರೆಸ್‌ನ ತೀವ್ರ ಒತ್ತಕ್ಕೆ ಬಲಿಯಾದ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರು ಒರಿಸ್ಸಾದಲ್ಲಿನ ತೃತೀಯರಂಗದ ರ‌್ಯಾಲಿಯಲ್ಲಿ ಭಾಗವಹಿಸದೇ ಇದ್ದರೂ, ಅವರು ಸಮಾವೇಶವನ್ನುದ್ದೇಶಿಸಿ ದೂರವಾಣಿಯಲ್ಲಿ ಮಾತನಾಡಿದರು." ಪವಾರ್ ಅವರು ಪ್ರಯಾಣಿಸಬೇಕಿದ್ದ ವಿವಾನದಲ್ಲಿ ತಾಂತ್ರಿಕ ತೊಂದರೆಗಳು ಕಂಡುಬಂದಿರುವ ಕಾರಣ ಅವರು ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ" ಎಂಬುದಾಗಿ ಎನ್‌ಸಿಪಿ ವಕ್ತಾರ ಮದನ್ ಬಫಾನ ಹೇಳಿದ್ದಾರೆ.ಶರದ್ ಗೈರಿಗೆ ವಿಮಾನದ ತಾಂತ್ರಿಕ ದೋಷವನ್ನು ಪಕ್ಷವು ಮುಂದಿಟ್ಟಿದೆ. ಶರದ್ ಪವಾರ್ ಅವರು "ಇದು ಅನಿರೀಕ್ಷಿತ, ನಾನು ಪೋನ್ ಮುಖಾಂತರ ಸಮಾವೇಶವನ್ನುದ್ದೇಶಿ ಮಾತನಾಡುತ್ತೇನೆ. ನಾನು ಒರಿಸ್ಸಾಗೆ ನಾಳೆ ಅಥವಾ ನಾಡಿದ್ದು ತೆರಳಲಿದ್ದೇನೆ" ಎಂದು ನುಡಿದರು.ಎಡಪಕ್ಷಗಳು ಮತ್ತು ಬಿಜೆಡಿಯೊಂದಿಗಿನ ಒಪ್ಪಂದವು ಒರಿಸ್ಸಾಗೆ ಮಾತ್ರ ಹಾಗೂ ಎನ್‌ಸಿಪಿಯು ತೃತೀಯ ರಂಗದ ಅಂಗವಲ್ಲ ಎಂಬುದಾಗಿ ಪ್ರಧಾನಿ ಪದವಿ ಆಕಾಂಕ್ಷಿ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.ಕಾಂಗ್ರೆಸ್ ತಾಕೀತು ಶರದ್ ಪವಾರ್ ತೃತೀಯ ರಂಗದ ಸಮಾವೇಶದಲ್ಲಿ ಭಾಗವಹಿಸುವುದಕ್ಕೆ ಕಾಂಗ್ರೆಸ್ ಗುರುವಾರ ಸಾರ್ವಜನಿಕವಾಗಿ ತನ್ನ ಅಸಮಾಧಾನ ತೋರ್ಪಡಿಸಿತ್ತು. "ಅವರು ತೃತೀಯ ರಂಗದ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳದಿದ್ದರೆ ಚೆನ್ನಾಗಿರುತ್ತದೆ" ಎಂಬುದಾಗಿ ಗೃಹಸಚಿವ ಪಿ. ಚಿದಂಬರಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅಲ್ಲದೆ ತೃತೀಯ ರಂಗವು ಕಾಂಗ್ರೆಸ್‌ಗೆ ವಿರೋಧವಾಗಿ ಸಂಘಟಿತವಾಗಿರುವ ಕಾರಣ ಪವಾರ್ ಅದರಲ್ಲಿ ಭಾಗವಹಿಸುವುದು ಸೂಕ್ತವಲ್ಲ ಎಂದೂ ಅಭಿಪ್ರಾಯಿಸಿದ್ದರು. |