ವರುಣ್ ಗಾಂಧಿ ಕೊಲೆ ಸಂಚಿನ ಕುರಿತು ಭೂಗತ ಪಾತಕಿ ಚೋಟಾ ಶಕೀಲ್ ಹಾಗೂ ಆತನ ಬಂಟ ರಶೀದ್ ಮಲ್ಬಾರಿ ನಡುವಿನ ದೂರವಾಣಿ ಮಾತುಕತೆಯಲ್ಲಿ, ರಶೀದ್ ವರುಣ್ ಗಾಂಧಿಯನ್ನು ಮುಗಿಸುವ ವಿಚಾರದಲ್ಲಿ ಹಿಂದೇಟು ಹಾಕಿದ್ದ ಎನ್ನಲಾಗಿದೆ.ಮಂಗಳೂರಿನ ಉಳ್ಳಾಲದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಐವರು ದಾವೂದ್ ಸಹಚರರ ಗುಂಪಿನಲ್ಲಿ ರಶೀದ್ ಸಹ ಒಬ್ಬನಾಗಿದ್ದು, ಮಾರ್ಚ್ 15ರಿಂದ 21ರೊಳಗೆ ಇವರಿಬ್ಬರ ನಡುವೆ ನಡೆದ (ಹಿಂದಿಯಲ್ಲಿ) ದೂರವಾಣಿ ಮಾತುಕತೆಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದೆ. ಅದರ ತಾತ್ಪರ್ಯ ಇಂತಿದೆ.ಮಾರ್ಚ್ 15 ರಶೀದ್: ಸಲಾಂ ವಲೇಕುಂ ಭಾಯ್ಶಕೀಲ್: ವಲೇಕುಂ. ಆ ಹುಡುಗನನ್ನು ನೋಡಿಕೊಳ್ಳಿ. ಆತ 28ಕ್ಕೆ ಕೋರ್ಟಿಗೆ ಹೋಗುತ್ತಾನೆ. ಈ ಕೆಲ್ಸ ಆಗಲೇ ಬೇಕು. ಹುಷಾರು. ನಮ್ಮವರು(ಮುಸ್ಲಿಮರು) ಭಯಭೀತರಾಗಿದ್ದಾರೆ. ಈ ಕೆಲಸ ಆಗಲೇ ಬೇಕು. ಆತನಿಗೆ ಕಾಯಿಲೆ, ಔಷಧಿ ನೀಡಬೇಕಾಗಿದೆ. ಅವನಿಗೆ ಸೂಕ್ತ ಔಷಧಿ ನೀಡಿ.ರಶೀದ್: ಅಣ್ಣಾ ಈ ಕೆಲ್ಸ ಸ್ವಲ್ಪ ಕಷ್ಟ. ಪಿಲಿಭಿತ್ ಇಲ್ಲಿಂದ ಬಹಳ ದೂರವಿದೆ. ಅಲ್ಲದೆ ತುಂಬ ಸೆಕ್ಯುರಿ ಗಾರ್ಡ್‌ಗಳಿದ್ದಾರೆ. ಅಲ್ಲಿ ನಮಗೆ ಯಾವುದೇ ಸಂಪರ್ಕವಿಲ್ಲ.ಶಕೀಲ್: ಗಜಿಯಾಬಾದಿನಲ್ಲಿ ನಿಮಗೆ ಶಸ್ತ್ರಾಸ್ತ್ರ, ವಾಹನ, ಜನ ಎಲ್ಲಾ ಸಿಕ್ತಾರೆ. ಎರಡು ಎಕೆ 47 ರೈಫಲ್‌ಗಳಿವೆ ಸರಿಯಾಗಿ ಬಳಸಿ. ನಿನ್ನ ಬಳಿ ಪಿಸ್ತೂಲ್ ಮತ್ತು ಗುಂಡುಗಳಿವೆ.ರಶೀದ್: ಸರಿ ಅಣ್ಣಾ. ಆದರೆ ನಾನು ನಿಮ್ಗೆ ಮುತಾಲಿಕ್ ಬಗ್ಗೆ ಹೇಳಿದ್ದೆ. ಇಲ್ಲಿ ಮಂಗಳೂರಲ್ಲಿ ಆತನೂ ಒಂದು ಒಳ್ಳೆಯ ಬೇಟೆ.ಶಕೀಲ್: ಅದ್ಯಾರು?ರಶೀದ್: ಅವನು ರಾಮ್ ಸೇನಾ ಮುಖ್ಯಸ್ಥ. ಆತ ಆರೆಸ್ಸೆಸ್‌ನವ.ಶಕೀಲ್: ಇಲ್ಲಾ ಡಬ್ಬಲ್(ರಶೀದ್ ಅಡ್ಡಹೆಸರು). ಅವನನ್ನು ಯಾರಿಗೆ ಗೊತ್ತು. ಮೊದಲು ಆ ವರುಣ್‌ನನ್ನು ಮುಗಿಸಿ. ನೀವು ಹೊರಡಿ. ಖುದಾ ಹಫೀಜ್ಮಾರ್ಚ್ 18 ಅಪರಿಚಿತ: ಅಣ್ಣಾ ಸಲಾಂ. ನೀವು ಹೊರಟಿದ್ದೀರಾ, ಬಾಸ್ ಕೇಳ್ತಿದ್ದಾರೆ.ರಶೀದ್: ಎಲ್ಲಾ ರೆಡಿ. ಅಣ್ಣನ ಜತೆ ಈಗಲೇ ಮಾತಾಡಬೇಕಿದೆ.ಅಪರಿಚಿತ: ಬಾತ್ರೂಮಲ್ಲಿದ್ದಾರೆ.... ಅವ್ರು ಬಂದ ತಕ್ಷಣ ಹೇಳ್ತೀನಿ.ಮಾರ್ಚ್ 21 ಶಕೀಲ್: ಹೊರಟ್ರಾ?ರಶೀದ್: ಹೌದಣ್ಣಾ. ಈಗಷ್ಟೆ ಕಸರ್ ತೊರೆದಿದ್ದೇವೆ. ಆದ್ರೂ ಈ ಕುರಿತು ಇನ್ನೊಮ್ಮೆ ಯೋಚಿಸಿ.ಶಕೀಲ್: ಸರಿ. ಗಜಿಯಾಬಾದ್ ತಲುಪಿ. ಬಳಿಕ ನಿಮ್ಮೊಂದಿಗೆ ಮಾತಾಡ್ತೀನಿ. ಚಿಂತಿಸಬೇಡಿ. ಖುದಾ ಹಫೀಜ್ |