ಬಾಹ್ಯಾಕಾಶ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ದ ಹಿರಿಯ ವಿಜ್ಞಾನಿಗಳು ಹಾಗೂ ಇಂಜಿಯನಿಯರ್‌ಗಳ ಮೇಲೆ ಲಷ್ಕರ್-ಇ-ತೋಯ್ಬಾ ಉಗ್ರಗಾಮಿ ಸಂಘಟನೆಯು ಗುರಿಇರಿಸಿದೆ ಎಂದು ಹೇಳಲಾಗಿದೆ.
2008ರ ಬೆಂಗಳೂರು ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಸರ್ಫರಾಜ್ ನವಾಜ್ ಕರ್ನಾಟಕ ಪೊಲೀಸರ ವಶದಲ್ಲಿದ್ದು, ಈತನ ವಿಚಾರಣೆ ವೇಳೆಗೆ ಈ ವಿಷಯ ಹೊರಬಿದ್ದಿದೆ. ಇಸ್ರೋ ಮುಖ್ಯಸ್ಥ ಮಾಧವನ್ ನಾಯರ್ ಸೇರಿದಂತೆ ಇತರ ವಿಜ್ಞಾನಿಗಳ ಮೇಲೆ ದಾಳಿ ನಡೆಸಲು ಲಷ್ಕರೆ ಉಗ್ರರರನ್ನು ಕಳುಹಿಸಲು ಜಸಿಮ್ ಎಂಬ ಪಾಕಿಸ್ತಾನದ ಉಗ್ರ ಯೋಜಿಸಿದ್ದಾನೆ ಎಂದು ಸರ್ಫರಾಜ್ ಹೇಳಿದ್ದಾನೆ.
ಇದಲ್ಲದೆ, ಅಗ್ನಿ ಕ್ಷಿಪಣಿಯಲ್ಲಿ ತೊಡಗಿಸಿಕೊಂಡಿರುವ ಒರ್ವ ಮುಸ್ಲಿಂ ವಿಜ್ಞಾನಿಯೂ ಸಹ ಸಂಭಾವ್ಯ ಗುರಿ ಎಂದು ಜಸಿಮ್ ಹೇಳಿದ್ದಾನೆನ್ನಲಾಗಿದೆ.
ಇಸ್ರೋ ಮುಖ್ಯಸ್ಥ ಮಾಧವನ್ ನಾಯರ್ ಅಲ್ಲದೆ, ಅಲೆಕ್ಸ್, ಸಜೀವ್‌ನಾಥ್, ಸುರೇಶ್ ಕುಮಾರ್ ಮತ್ತು ಉತ್ತರ ಪ್ರದೇಶದ ಮಹಿಳಾ ವಿಜ್ಞಾನಿ ಸೇರಿದಂತೆ ಬಾಹ್ಯಾಕಾಶ ಯೋಜನೆಯಲ್ಲಿ ತೊಡಗಿಸಿಕೊಂಡವರನ್ನು ಗುರಿಯಾಗಿಸಲು ಜಸಿಮ್ ಅಲಿಯಾಸ್ ಟಹ್ಸಿನ್ ತಿಳಿಸಿದ್ದಾನೆಂದು ನವಾಜ್ ತನಿಖೆಯ ವೇಳೆಗೆ ಹೇಳಿದ್ದಾನೆನ್ನಲಾಗಿದೆ. |