ಜಿ-20 ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲು ಲಂಡನ್‌ಗೆ ನಾಲ್ಕು ದಿವಸಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ನಸುಕಿನಲ್ಲಿ ಸ್ವದೇಶಕ್ಕೆ ಮರಳಿದ್ದಾರೆ.
ಸಮ್ಮೇಳದ ವೇಳೆ ಅವರು ಬ್ರಿಟಿಷ್ ಪ್ರಧಾನಿ ಗೊರ್ಡನ್ ಬ್ರೌನ್ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನೂ ಅವರು ನಡೆಸಿದ್ದಾರೆ.
"ದ್ವಿಪಕ್ಷೀಯ ಮತ್ತು ಇತರ ಸಭೆಗಳು ಫಲಪ್ರದವಾಗಿದ್ದು ಉಪಯುಕ್ತವಾಗಿರುವ ಕುರಿತು ತನಗೆ ತೃಪ್ತಿ ತಂದಿದೆ, ಮತ್ತು ಜಿ-20 ಸಮ್ಮೇಳನವು ಮುಂದುವರಿಯುವ ಹಾದಿಯನ್ನು ತೋರಿದೆ" ಎಂದು ಅವರು ಬ್ರಿಟನ್ ತೊರೆಯುವ ವೇಳೆಗೆ ಹೇಳಿದ್ದಾರೆ.
ವಿಶ್ವವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳುವ ಸಲುವಾಗಿ ಜಿ-20 ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಸಭೆಯಲ್ಲಿ ಪಾಲ್ಗೊಂಡಿರುವ ರಾಷ್ಟ್ರಗಳು 1.1 ಟ್ರಿಲಿಯನ್ ಡಾಲರ್ ಮೊತ್ತವನ್ನು ಅಗತ್ಯವಿರುವ ರಾಷ್ಟ್ರಗಳಿಗೆ ಒದಗಿಸಲು ಅನುಕೂಲವಾಗುವಂತೆ ಕ್ರೋಢೀಕರಿಸಲು ಬದ್ಧತೆ ಸೂಚಿಸಿವೆ. |