1984ರ ಸಿಖ್ ವಿರೋಧಿ ದಂಗಗೆ ಸಂಬಂಧಿಸಿದಂತೆ ಜಗದೀಶ್ ಟೈಟ್ಲರ್ ಅವರಿಗೆ 'ಕ್ಲೀನ್ ಚಿಟ್' ನೀಡಿರುವ ಸಿಬಿಐ ಕ್ರಮವನ್ನು ಖಂಡಿಸಿ, ಹತ್ಯಾಕಾಂಡದ ಸಂತ್ರಸ್ತರು ಶನಿವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಗುರು ನಾನಕ್ ಮಿಷನ್ ಚೌಕದ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ನಂತರ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಟೈಟ್ಲರ್ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿದರು. ನಂತರ ಕುಪಿತ ಗುಂಪು ಟೈಟ್ಲರ್ ಅವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಕಾಂಗ್ರೆಸ್ ನಿರ್ಧಾರವನ್ನು ತೀವ್ರವಾಗಿ ಖಂಡಿಸಿ, ಬಲವಂತವಾಗಿ ಕಚೇರಿಯನ್ನು ಪ್ರವೇಶಿಸಿದ್ದರು.
ಅಲ್ಲಿದ್ದ ವಸ್ತುಗಳನ್ನು ಲೂಟಿ ಮಾಡಿ ಕಿಟಕಿಯ ಗಾಜು, ಪೀಠೋಪಕರಣಗಳನ್ನು ಧ್ವಂಸಗೊಳಿಸಿತು. ಈ ಸಂದರ್ಭದಲ್ಲಿ ಕಚೇರಿಯ ಒಳಗಿದ್ದ ಸಮಿತಿಯ ಪದಾಧಿಕಾರಿಗಳು ಪರಾರಿಯಾದರು ಎಂದು ಮೂಲಗಳು ತಿಳಿಸಿವೆ. ನಂತರ ಪೊಲೀಸರು ಬಂಧಿಸುವ ಮೊದಲೇ ಗುಂಪು ಚದುರಿತು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. |