ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳಿಗೆ ಜೀವ ಬೆದರಿಕೆ ಸಾಧ್ಯತೆ ಹಿನ್ನಲೆಯಲ್ಲಿ ವ್ಯೋಮ ಇಲಾಖೆಯ ಕಾರ್ಯದರ್ಶಿ ಜಿ. ಮಾಧವನ್ ನಾಯರ್ ಸೇರಿದಂತೆ ಇತರ ಆರು ಮಂದಿ ವಿಜ್ಞಾನಿಗಳಿಗೆ ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಮಾಧವನ್ ನಾಯರ್ ಅವರಿಗೆ ‘ಝಡ್’ ದರ್ಜೆ ಹಾಗೂ ಇತರ ಆರು ಮಂದಿ ವಿಜ್ಞಾನಿಗಳಿಗೆ ‘ವೈ’ ದರ್ಜೆಯ ಭದ್ರತೆಯನ್ನು ಒದಗಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ಮೂಲಗಳು ತಿಳಿಸಿವೆ. |