| ಏಕ್ತಾ ಚೌಧರಿ: ಮಿಸ್ ಇಂಡಿಯಾ ಯೂನಿವರ್ಸ್ 2009 | | | ಮುಂಬೈ, ಸೋಮವಾರ, 6 ಏಪ್ರಿಲ್ 2009( 10:41 IST ) | | | |
| | |
| ಭಾನುವಾರ ರಾತ್ರಿ ಮುಂಬೈಯಲ್ಲಿ ನಡೆದ ಪ್ಯಾಂಟಲೂನ್ಸ್ ಮಿಸ್ ಇಂಡಿಯಾ-2009 ಸ್ಫರ್ಧೆಯಲ್ಲಿ ಮಿಸ್ ಇಂಡಿಯಾ ಯೂನಿವರ್ಸ್ ಆಗಿ ಏಕ್ತಾ ಚೌಧುರಿ, ಮಿಸ್ ಇಂಡಿಯಾ ವರ್ಲ್ಡ್ ಆಗಿ ಪೂಜಾ ಛೋಪ್ರಾ ಹಾಗೂ ಮಿಸ್ ಇಂಡಿಯಾ ವರ್ಲ್ಡ್ ಅರ್ಥ್ ಆಗಿ ಶ್ರೇಯಾ ಕಿಶೋರ್ ಕಿರೀಟ ಧರಿಸಿದ್ದಾರೆ. ಇವರಲ್ಲಿ ಏಕ್ತಾ ದೆಹಲಿಯವರಾದರೆ, ಪೂಜಾ ಪುಣೆಯವರು ಮತ್ತು ಶ್ರೇಯಾ ಮುಂಬೈಯವರು.ಕಿರೀಟ ತೊಟ್ಟಿರುವ ಮೂರೂ ಸುಂದರಿಯರಿಗೂ ಚಾಕಲೇಟ್‌ಗಳಂದರೆ ಬಹಳ ಇಷ್ಟವಂತೆ. ಮತ್ತು ಮನೆಯ ತಿನಿಸೇ ಅಚ್ಚುಮೆಚ್ಚು ಎಂದು ಹೇಳಿಕೊಂಡಿದ್ದಾರೆ. ಅಂಧೇರಿ ಕ್ರೀಡಾ ಸಂಕೀರ್ಣದಲ್ಲಿ ಸಾಯಂಕಾಲದ ತಂಗಾಳಿಯೊಂದಿಗೆ ಸ್ಫರ್ಧಾ ಮಿಂಚು ಹರಿಯಿತು. ನೀವು ದೇವರನ್ನು ಭೇಟಿಯಾಗದರೆ ಕೇಳುವ ಪ್ರಶ್ನೆಯಾವುದು ಮತ್ತು ಯಾಕೆ ಎಂಬುದು ಮೂರು ಸ್ಫರ್ಧಿಗಳಿಗೆ ಕೇಳಲಾಗಿದ್ದ ಸಾಮಾನ್ಯ ಪ್ರಶ್ನೆ.ತನ್ನ ತಾಯಿಯ ಪಾಲನೆಪೋಷಣೆಯಲ್ಲೇ ಬೆಳೆದ(ಸಿಂಗಲ್ ಮದರ್) 23ರ ಹರೆಯದ ಚೋಪ್ರಾ ಅವರು, "ಯಾಕೆ ಕೆಲವು ಮಕ್ಕಳು ತಾಯಿಯ ಪ್ರೀತಿಯಿಂದ ವಂಚಿತರಾಗಿದ್ದಾರೆ" ಎಂದು ಕೇಳಲು ಬಯಸುವುದಾಗಿ ನುಡಿದರು. ಇನ್ನೋರ್ವ ಸ್ಫರ್ದಿ 23ರ ಹರೆಯದ ಚೌಧರಿ, "ನಮ್ಮೆಲ್ಲರನ್ನು ಸಮಾನವಾಗಿ ಸೃಷ್ಟಿಸಿದ್ದರೂ ನಾವ್ಯಾಕೆ ದೇವರ ಹೆಸರಿನಲ್ಲಿ ಪರಸ್ಪರ ಹೊಡೆದಾಡುತ್ತೇವೆ" ಎಂದು ದೇವರನ್ನು ಕೇಳುತ್ತಾರಂತೆ. ಇನ್ನೊಬ್ಬಾಕೆ 22ರ ಹರೆಯದ ಕಿಶೋರ್ ಅವರು ಮರ್ತ್ಯತೆ ಕುರಿತು ಕೇಳಲಿಚ್ಚಿಸುವುದಾಗಿ ನುಡಿದರಾದರೂ, ಗೊಂಲಕ್ಕೆ ಬಿದ್ದಂತೆ ಕಂಡು ಬಂದಿತ್ತು.ಕಳೆದ ವರ್ಷದ ವಿಜೇತರಾಗಿರುವ ಮಿಸ್ ವರ್ಲ್ಡ್ ಮೊದಲ ರನ್ನರ್ ಅಪ್ ಪಾರ್ವತಿ ಒಮನ್‌ಕುಟ್ಟನ್, ಮಿಸ್ ಇಂಡಿಯಾ ಯೂನಿವರ್ಸ್ ಸಿಮ್ರನ್ ಕೌರ್ ಮುಂಡಿ ಮತ್ತು ಮಿಸ್ ಇಂಡಿಯಾ ಅರ್ಥ್ ತನ್ವಿ ವ್ಯಾಸ್ ಅವರು ನೂತನ ವಿಜೇತರಿಗೆ ಕಿರೀಟ ಧಾರಣೆ ಮಾಡಿದರು.ಸೋನಾಕ್ಷಿ ಅವರಿಗೆ ಮಿಸ್ ಇಂಡಿಯಾ ಸೆಕ್ಸಿ ಲೆಗ್ಸ್, ದೀಕ್ಷಾ ಅವರಿಗೆ ಮಿಸ್ ಫ್ರೆಶ್ ಫೇಸ್, ಹರ್ಶಿತಾ ಅವರಿಗೆ ಮಿಸ್ ಅಗೈಲ್, ಕರಿಶ್ಮಾ ಕಾರ್ನಿಕ್ ಅವರಿಗೆ ಮಿಸ್ ಕಾನ್ಫಿಡೆಂಟ್, ರಾಗಿಣಿ ಅವರಿಗೆ ಮಿಸ್ ಬ್ಯೂಟಿಫುಲ್ ಹೇರ್, ನೀಹಾರಿಕ ಅವರಿಗೆ ಮಿಸ್ ಬ್ಯೂಟಿಫುಲ್ ಐಸ್, ಶ್ರೇಯಾ ಕಿಶೋರ್ ಅವರಿಗೆ ಮಿಸ್ ಹಾಸ್ಪಿಟಾಲಿಟಿ, ಡಿಂಪಲ್ ಕಪಾಡಿಯಾ ಅವರಿಗೆ ಮಿಸ್ ಪೊಟೋಜೆನಿಕ್, ಇಶಿತಾ ಸರ್ಕಾರ್ ಅವರಿಗೆ ಗೋಲ್ಡನ್ ಹಾರ್ಟ್ ಪ್ರಶಸ್ತಿಗಳು ಸಂದವು.ಬಾಲಿವುಡ್ ಘಟಾನುಘಟಿಗಳಾದ ನಿರ್ದೇಶಕ ಮಧುರ್ ಬಂಡಾರ್ಕರ್, ಅಜಯ್ ದೇವಗನ್, ಸುಶ್ಮಿತಾ ಸೇನ್, ಆಸಿನ್, ದೀಪಿಕಾ ಪಡುಕೋಣೆ, ಫ್ಯಾಶನ್ ಡಿಸೈನರ್ ನಂದಿತ ಮಹ್ತಾನಿ, ಐಜಿಎಂ ಮ್ಯಾನೆಜಿಂಗ್ ಡೆರೆಕ್ಟರ್ ರವಿ ಕೃಷ್ಣನ್, ಫ್ಯಾಶನ್ ಪತ್ರಿಕೆ ಸಂಪಾದಕ ಮಿಕಿ ಬರ್ದಮಾನ್ ಮತ್ತು ಲಾಕ್ಮೆ ಸಲಹೆಗಾರ ಅನಿಲ್ ಚೋಪ್ರಾ ಅವರು ತೀರ್ಪುಗಾರರಾಗಿದ್ದರು. ರಾಷ್ಟ್ರಾದ್ಯಂತ ಭಾಗವಹಿದ್ದ ಸ್ಫರ್ಧಿಗಳಲ್ಲಿ 20 ಮಂದಿ ಕ್ವಾರ್ಟರ್ ಫೈನಲ್ ತಲುಪಿದ್ದರು. ತುಲಿಪ್ ಭಟ್ಟಾಚಾರ್ಯ, ಸೊನಾಕ್ಷಿ ಸಜ್ನಾನಿ, ಶ್ರೇಯಾ ಕಿಶೋರ್, ರಾಗಿಣಿ ದ್ವಿವೇದಿ, ಪೂಜಾ ಹೆಗ್ಡೆ, ನಿಶಿತಾ ಖಡಿವಾಲ, ನಿಹಾರಿಕಾ ನಾಗ್, ನಂದಿನಿ ವೈದ್, ಕರಿಶ್ಮಾ ಕಾರ್ನಿಕ್, ಇಶಿತಾ ಸರ್ಕಾರ್, ಹರ್ಷಿತಾ ಸಕ್ಸೆನಾ, ಹನಿಕ ಪರ್ಯಾನಿ, ಫೈತ್ ಪಾಂಡೆ, ಏಕ್ತಾ ಚೌಧರಿ, ಡಿಂಪಲ್ ಪಟೇಲ್, ದೀಕ್ಷಾ ಸೇತ್, ಅಪರಾಜಿತ ಶರ್ಮಾ, ಅಕಾಂಕ್ಷ ಯಾದವ್ ಮತ್ತು ಅರೋಹಿ ಕದಮ್ ಈ ಕ್ವಾರ್ಟರ್ ಫೈನಲಿಸ್ಟ್‌ಗಳು.ಇವರಲ್ಲಿ ದೀಕ್ಷಾ, ಶ್ರೇಯಾ, ಏಕ್ತಾ, ರಾಗಿಣಿ, ಫೈತ್, ಪೂಜಾ, ಹರ್ಷಿತ, ನಿಹಾರಿಕ, ಇಶಿತಾ ಮತ್ತು ನಂದಿನಿ ಸೆಮಿ ಫೈನಲ್ ಸುತ್ತಿಗೆ ತಲುಪಿದ್ದರು. |
| |
| | |
| | | |
|
| | |
|
|
| | |
|
|
| |
| | |