ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷ ಬಿಜೆಪಿ ನೇತೃತ್ವದ ಮೈತ್ರಿಕೂಟ ಎನ್‌ಡಿಎಯು ಆಡಳಿತಾರೂಢ ಮೈತ್ರಿಕೂಟ ಯುಪಿಎಗಿಂತ ಅತ್ಯಲ್ಪ ಅಂತರದ ಮುನ್ನಡೆ ಸಾಧಿಸಬಹುದಾಗಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ.
ಸಮೀಕ್ಷೆ ಪ್ರಕಾರ, ಎನ್‌ಡಿಎ ಮೈತ್ರಿಕೂಟವು 187 ಸ್ಥಾನಗಳನ್ನು ಗೆಲ್ಲಬಹುದು. ಯುಪಿಎಗೆ 178 ಸ್ಥಾನಗಳು ಲಭಿಸುವ ಸಾಧ್ಯತೆಗಳಿವೆ. ಮತ್ತು ಬಿಜೆಪಿಯು 144 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 133 ಸ್ಥಾನಗಳನ್ನು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ.
ಟಿವಿ ವಾಹಿನಿಯೊಂದು ನಡೆಸಿರುವ ಸಮೀಕ್ಷೆ ಪ್ರಕಾರ ಯುಪಿಎ ಮತ್ತೆ ತನ್ನ ಹಳೆಯ ಮಿತ್ರರಾದ ಸಮಾಜವಾದಿ ಪಕ್ಷ, ಆರ್‌ಜೆಡಿ ಮತ್ತು ಎಲ್‌ಜೆಪಿಗಳನ್ನು ಮತ್ತೆ ತನ್ನ ತೆಕ್ಕೆಗೆ ಎಳೆದುಕೊಂಡರೆ ಅದರ ಸಂಖ್ಯೆ 235ಕ್ಕೇರಬಹುದಾಗಿದೆ. ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷವು 30 ಸ್ಥಾನಗಳನ್ನು ಗೆದ್ದರೆ, ಆರ್‌ಜೆಡಿ/ಎಲ್‌ಜೆಪಿ ಕೂಟವು ಬಿಹಾರದಲ್ಲಿ 15 ಸ್ಥಾನಗಳನ್ನು ಗೆಲ್ಲಬಹುದಾಗಿದೆ.
ಬಿಜೆಪಿಯು ಅಸ್ತಿತ್ವದಲ್ಲಿರುವ ತನ್ನ ಮೈತ್ರಿಯ ಮೂಲಕ ಮತ್ತೆ 43 ಸ್ಥಾನಗಳನ್ನು ಸೇರಿಸಲು ಶಕ್ತವಾಗಬಹುದಾಗಿದ್ದು, ಒಟ್ಟು ಸಂಖ್ಯೆ 187 ಸ್ಥಾನಕ್ಕೇರಲಿದೆ. |