ಚುನಾವಣೆಯು ಮನೆಬಾಗಿಲಿಗೆ ಬಂದು ನಿಂತಿರುವ ಸಂದರ್ಭದಲ್ಲಿ ಮೇಲ್ವರ್ಗದವರನ್ನು ಓಲೈಸಲು ಮುಂದಾಗಿರುವ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಮೇಲ್ವರ್ಗಕ್ಕೂ ಮೀಸಲಾತಿ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ. ಇದಕ್ಕಾಗಿ ತನ್ನ ಪಕ್ಷವು ಸಂವಿಧಾನ ತಿದ್ದುಪಡಿಗೆ ಒತ್ತಾಯಿಸಲಿದೆ ಎಂಬುದಾಗಿ ರೈಲೈ ಸಚಿವರು ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ನುಡಿದರು.
ಇದಲ್ಲದೆ, ನ್ಯಾಯಾಂಗದಲ್ಲಿಯೂ ಮೀಸಲಾತಿ ಕುರಿತು ಅವರು ಒಲವು ವ್ಯಕ್ತಪಡಿಸಿದ್ದಾರೆ. ಸರ್ಕಾರದ ಸೇವೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಹಾಗೂ ಅವರ ಜೀವನದ ಇತರ ಹಂತಗಳಿಗೂ ಒಳಿತನ್ನು ಒದಗಿಸುವುದು ಪಕ್ಷದ ಆದ್ಯತೆ ಎಂದು ಅವರು ನುಡಿದರು.
ಕೋಮುವಾದ ಮತ್ತು ಭಯೋತ್ಪಾನೆ 'ಅವಳಿ ಸಹೋದರಿಯರು' ಎಂದು ನುಡಿದ ಲಾಲೂ ಪ್ರಸಾದ್, ಭಯೋತ್ಪಾದನಾ ವಿರೋಧಿ ಕಾನೂನನ್ನು ಕೋಮುವಾದಿ ಚಟುವಟಿಕೆಗೂ ಹೇರಲು ಆರ್‌ಜೆಡಿ ಶ್ರಮಿಸಲಿದೆ ಎಂದು ನುಡಿದರು. |