ಪ್ರಧಾನಿ ಮನಮೋಹನ್ ಸಿಂಗ್ ಭೇಟಿಗೆ ನಿಗದಿಯಾಗಿರುವ ಮುನ್ನಾದಿನವಾದ ಸೋಮವಾರ ಅಸ್ಸಾಮಿನ ವಿವಿಧೆಡೆ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಲಾಗಿದ್ದು, ಈ ವಿಧ್ವಂಸಕಾರಿ ಕೃತ್ಯದಿಂದ ಕನಿಷ್ಠ ಏಳು ಮಂದಿ ಸಾವಿಗೀಡಾಗಿ, ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ಹಿಂದೆ ಉಲ್ಫಾ ಸಂಘಟನೆಯ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಗುವಾಹತಿಯ ಮಾಲಿಗಾಂವ್‌ನಲ್ಲಿ ಹಾಗೂ ಧೇಕಿಯಜುಲಿ ಹಾಗೂ ಭಾರತ-ಬಾಂಗ್ಲ ಗಡಿ ಪ್ರದೇಶವಾಗಿರುವ ಧುಬ್ರಿ ಸೇರಿದಂತೆ ನಾಲ್ಕುಕಡೆಗಳಲ್ಲಿ ಸ್ಫೋಟ ನಡೆಸಲಾಗಿದೆ. ಬಾಂಬುಗಳನ್ನು ಮೋಟಾರ್ ಬೈಕ್ ಹಾಗೂ ಸೈಕಲ್‌ಗಳಲ್ಲಿ ಇರಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಉಲ್ಫಾಸಂಘಟನೆಯು ಬುಧವಾರದಂದು ತನ್ನ ಸಂಸ್ಥಾಪನಾ ದಿನವನ್ನಾಚರಿಸುತ್ತಿದೆ.
ಪ್ರಧಾನಿ ಭೇಟಿಯ ಮುನ್ನಾದಿನ ದುಷ್ಕರ್ಮಿಗಳು ಈ ದುಷ್ಕೃತ್ಯ ನಡೆಸಿದ್ದರೂ, ಪ್ರಧಾನಿ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಅವರು ದಿಸ್ಪುರ್ ಮತ್ತು ದಿಬ್ರುಗಡದಲ್ಲಿ ಭಾಷಣ ಮಾಡಲಿದ್ದಾರೆ.
|