ಭಾರತ ವಿಭಜನೆಯಾಗಲು ಮಾಜಿ ಪ್ರಧಾನಿ ಪಂಡಿತ್ ನೆಹರೂ ಮತ್ತು ಲೇಡಿ ಎಡ್ವಿನಾ ಮೌಂಟ್ ಬ್ಯಾಟನ್ ನಡುವಣ ಪ್ರೇಮ ವ್ಯವಹಾರವೇ ಕಾರಣ ಎಂದು ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಹೇಳಿದ್ದಾರೆ.
'ವೈಸ್‌ರಾಯ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್ ಅವರು ನೆಹರೂರ ಈ ಹುಚ್ಚಿನ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದ ಪರಿಣಾಮ ದೇಶವೇ ಒಡೆಯಿತು' ಎಂದು ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಪ್ರಕಟವಾಗಿರುವ ಸಂದರ್ಶನದಲ್ಲಿ ಠಾಕ್ರೆ ದೂರಿದರು.
ಪಾಕಿಸ್ತಾನವು ಭಾರತಕ್ಕೆ ಬೆದರಿಕೆಯಾಗಿ ಪರಿಣಮಿಸಿದೆಯಲ್ಲ ಎದು ಕೇಳಿದಾಗ, 'ನೆಹರೂ-ಎಡ್ವಿನಾ ಪ್ರೇಮ ವ್ಯವಹಾರ ಮತ್ತು ಪಾಕಿಸ್ತಾನದ ಉದಯದ ಬಗ್ಗೆ ನನ್ನ ಬಳಿ ಚಿತ್ರವೊಂದಿದೆ. ಈ ಚಿತ್ರವನ್ನು 'ಮುಖಭಂಗ' ತಡೆಯುವ ನಿಟ್ಟಿನಲ್ಲಿ ಇಂಗ್ಲೆಂಡಿನಲ್ಲಿ ನಿಷೇಧಿಸಲಾಗಿದೆ. ಇದು ದೇಶಭಕ್ತಿ' ಎಂದು ಠಾಕ್ರೆ ವ್ಯಂಗ್ಯವಾಡಿದರು.
ಈ ಚಿತ್ರವನ್ನು ಚಿತ್ರ ನಿರ್ಮಾಪಕ, ದಿವಂಗತ ಮನಮೋಹನ್ ದೇಸಾಯಿ ತಮಗೆ ನೀಡಿದ್ದರು ಎಂದೂ ಠಾಕ್ರೆ ಹೇಳಿದರು. ಎಡ್ವಿನಾ ಅವರು ಲಾರ್ಡ್ ಮೌಂಟ್ ಬ್ಯಾಟನ್ ಅವರ ಪತ್ನಿ. |