ನವದೆಹಲಿ: ಪ್ರಾಕೃತಿಕ ವಿಪತ್ತು ಅಥವಾ ಇನ್ನಾವುದೇ ಕಾರಣದಿಂದ ಜನರು ತೊಂದರೆಗೆ ಈಡಾದರೆ ಅವರಿಗೆ ನೆರವು ನೀಡಲು ಸಂಚಾರಿ ಆಸ್ಪತ್ರೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ತಲಾ 30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ದೇಶದಾದ್ಯಂತ ಇಂತಹ ಐದು ಆಸ್ಪತ್ರೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸಂಚಾರಿ ಆಸ್ಪತ್ರೆಗಳು 200 ಹಾಸಿಗೆಗಳನ್ನು ಒಳಗೊಂಡಿದ್ದು, 10ರಿಂದ 12 ಘಟಕಗಳು ಕಾರ್ಯ ನಿರ್ವಹಿಸಲಿವೆ. ತೀವ್ರ ನಿಗಾ ಘಟಕ, ರಕ್ತದ ಬ್ಯಾಂಕ್, ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಅಡುಗೆ ಮನೆ ಸೌಲಭ್ಯ ಇದರಲ್ಲಿ ಇರಲಿದೆ. |