ಆಡ್ವಾಣಿಯವರ ಭದ್ರಕೋಟೆ ಗುಜರಾತಿನ ಗಾಂಧಿನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನೃತ್ಯಗಾತಿ 52ರ ಹರೆಯ ಮಲ್ಲಿಕಾ ಸಾರಾಭಾಯ್ ಅವರು ಆಡ್ವಾಣಿಯವರನ್ನು ಬಹಿರಂಗ ಚರ್ಚೆ ಆಹ್ವಾನಿಸಿದ್ದಾರೆ. ಪಿಐ(ಎಂಎಲ್) ಮಲ್ಲಿಕಾರಿಗೆ ತನ್ನ ಬೆಂಬಲ ವ್ಯಕ್ತಪಡಿಸಿದೆ.
"ನಾನು ಆಡ್ವಾಣಿಯವರನ್ನು ಮುಕ್ತ ಚರ್ಚೆಗೆ ಆಹ್ವಾನಿಸುತ್ತೇನೆ" ಎಂಗು ಗಾಂಧಿನಗರವನ್ನು ನಾಲ್ಕು ಬಾರಿ ಪ್ರತಿನಿಧಿಸಿರುವ ಆಡ್ವಾಣಿಯವರಿಗೆ ಮಲ್ಲಿಕಾ ಸವಾಲು ಹಾಕಿದ್ದಾರೆ.
"ಕಳೆದ 20 ವರ್ಷಗಳಿಂದ ನಮ್ಮ ಸಂಸದರಾಗಿರುವ ಆಡ್ವಾಣಿಯವರಿಗೆ ನಾನು ಐದು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ" ಎಂದು ಹೇಳಿರುವ ಅವರು ಈ ಕೆಳಗಿನ ಪ್ರಶ್ನೆಗಳನ್ನು ಎತ್ತಿದ್ದಾರೆ.
*ನೀವು ಗಾಂಧಿನಗರದ ಕುರಿತು ಎಷ್ಟು ಮತ್ತು ಎಂತಹ ಪ್ರಶ್ನೆಗಳನ್ನು ಕೇಳಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಗಾಂಧಿನಗರದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಹಾಗೂ ಜೀವನಾಧಾರ ಸೃಷ್ಟಿಯ ಅವಕಾಶಕ್ಕಾಗಿ ನೀನು ಯಾವ ಪ್ರಯತ್ನ ಮಾಡಿದ್ದೀರಿ?
*ಗುಜರಾತಿನಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರ ವಿರುದ್ಧ ನಡೆದ ಹಿಂಸಾಚಾರ ಹಾಗೂ ದೌರ್ಜನ್ಯದ ಕುರಿತು ನೀವು ಯಾಕೆ ಧ್ವನಿಎತ್ತಿಲ್ಲ?
*ಕ್ಷೇತ್ರದ ಸಂಸದನಾಗಿದ್ದರೂ, ಇಲ್ಲಿನ ಸ್ಥಳಿಯ ಹಾಗೂ ರಾಜ್ಯದ ಸಮಸ್ಯೆಗಳ ಕುರಿತು ಯಾಕೆ ಯಾವುದೇ ಕಾಳಜಿ ತೋರಿಲ್ಲ ಇಲ್ಲವೇ ಕಳವಳ ವ್ಯಕ್ತಪಡಿಸಿಲ್ಲ?
*ಸಂಸದರ ನಿಧಿಯ ಕುರಿತು ಪ್ರಶ್ನಿಸಿದ ಮಲ್ಲಿಕಾ, ನೀವು ಈ ನಿಧಿಯನ್ನು ನಿಮ್ಮ ಕ್ಷೇತ್ರದ ಅವಕಾಶವಂಚಿತರಿಗಾಗಿ ಬಳಸಿದ್ದೀರಾ?
ಯುಪಿಎ ಪ್ರಧಾನಿ ಅಭ್ಯರ್ಥಿ ಮನಮೋಹನ್ ಸಿಂಗ್ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿರುವ ಆಡ್ವಾಣಿಯವರಿಗೆ ಅವರ ಕ್ಷೇತ್ರದ ಪ್ರತಿಸ್ಫರ್ಧಿ ಪ್ರಥಮಬಾರಿಗೆ ಚುನಾವಣಾ ಆಕಾಡಕ್ಕೆ ಇಳಿದಿರುವ ಮಲ್ಲಿಕಾ ಸಾರಾಭಾಯ್ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. |