ನವದೆಹಲಿ: ಬಿಜೆಪಿ ಯುವನಾಯಕ ವರುಣ್ ಗಾಂಧಿಯ ಕೈಕತ್ತರಿಸುವ ವೈರಸ್ ರಾಷ್ಟ್ರವ್ಯಾಪಿ ಪಸರಿಸುತ್ತಿದೆ. ಕರ್ನಾಟಕದ ಕತ್ತರಿಸಿ, ಕೊಚ್ಚಿ, ತಿಥಿ ಮಾಡಿದ ಬಳಿಕ ಇದೀಗ ಈ ಕತ್ತರಿಸುವ ಸಂಸ್ಕೃತಿ ಆಂಧ್ರಕ್ಕೆ ದಾಟಿದೆ. ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ. ಶ್ರೀನಿವಾಸ್ ಅವರೀಗ ಅಲ್ಪಸಂಖ್ಯಾತರತ್ತ ಬೆಟ್ಟು ಮಾಡುವವರ ಕೈಯನ್ನು ಕೊಚ್ಚಿ ಹಾಕುತ್ತೇನೆ ಎಂದು ತೊಡೆತಟ್ಟಿದ್ದಾರೆ.ನಿಜಾಮಾಬಾದಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಶ್ರೀನಿವಾಸ್ ಈ ಉದ್ರೇಕಕಾರಿ ಹೇಳಿಕೆ ನೀಡಿದ್ದು, ಬಿಜೆಪಿಯು ಇದರ ವಿರುದ್ಧ ಚುನಾವಣಾ