ನವದೆಹಲಿ: ಆಸ್ಕರ್ ಪಡೆವ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ಸ್ಲಂ ಡಾಗ್ ಮಿಲಿಯನೇರ್ನ ಜೈ ಹೋ ಗೀತೆಗೆ ಆಸ್ಕರ್ ಪಡೆವ ಅರ್ಹತೆಯಿಲ್ಲ ಎಂದು ಖ್ಯಾತ ಘಜಲ್ ಗಾಯಕ ಜಗ್ಜಿತ್ ಸಿಂಗ್ ಹೇಳಿದ್ದಾರೆ. ಆಸ್ಕರ್ ಪಡೆಯುವುದು ಒಂದು ಅಸಾಮಾನ್ಯ ಸಾಧನೆ. ಆದರೆ ಯಾವ ಹಾಡಿಗೆ ಆಸ್ಕರ್ ದಕ್ಕಿದೆಯೋ ಅದು ಅಂತಹ ವಿಶೇಷತೆಯಿಂದೇನೂ ಕೂಡಿಲ್ಲ ಎಂದು ತಮ್ಮ ಇಂತೆಹಾ ಆಲ್ಬಮ್ ಬಿಡುಗಡೆ ಸಮಾರಂಭದಲ್ಲಿ ಜ್ಜಿತ್ ಸಿಂಗ್ ಅಭಿಪ್ರಾಯಪಟ್ಟರು. |