ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಖ್ಯಾತ ಅರ್ಥಶಾಸ್ತ್ರಜ್ಞ ರಾಜಾ ಚೆಲ್ಲಯ್ಯ ವಿಧಿವಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖ್ಯಾತ ಅರ್ಥಶಾಸ್ತ್ರಜ್ಞ ರಾಜಾ ಚೆಲ್ಲಯ್ಯ ವಿಧಿವಶ
ತೊಂಬತ್ತರ ದಶಕದ ಆದಿಯಲ್ಲಿ ಜಾರಿಗೆ ತಂದಿರುವ ತೆರಿಗೆ ಸುಧಾರಣಾ ನೀತಿಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಜಾ ಚೆಲ್ಲಯ್ಯ ಅವರು ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದಾಗಿ ಸಾವಿಗೀಡಾಗಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಚೆಲ್ಲಯ್ಯ ಅವರ ಪುತ್ರಿ ಮಲ್ಲಿಕಾರಿಗೆ ದೂರವಾಣಿ ಕರೆ ನೀಡಿದ್ದು ಸಂತಾಪ ಸೂಚಿಸಿದ್ದಾರೆ. 87ರ ಹರೆಯದವರಾಗಿದ್ದ ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಸೈಂಟ್ ಥೋಮಸ್ ಚಿತಾಗಾರದಲ್ಲಿ ಬುಧವಾರ ನಡೆಯಲಿದೆ.

ತೆರಿಗೆ ಸುಧಾರಣಾ ಸಮಿತಿಗೆ 1991-1995ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಚೆಲ್ಲಯ್ಯ ಅವರು ಉದಾರವಾದದ ಬಳಿಕದ ರಾಷ್ಟ್ರದ ವಿತ್ತೀಯ ನೀತಿಗಳಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ.

ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಚೆಲ್ಲಯ್ಯ ಅವರು 'ಆಸ್ಪೆಕ್ಟ್ಸ್ ಆಫ್ ದ ಬ್ಲಾಕ್ ಇಕಾನಮಿ ಇನ್ ಇಂಡಿಯಾ' ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಮರಣಕಾಲಕ್ಕೂ ತೆರಿಗೆ ಸುಧಾರಣೆ ಕುರಿತು ಪುಸ್ತಕ ಒಂದನ್ನು ಬರೆಯುತ್ತಿದ್ದರು ಎಂಬುದಾಗಿ ಅವರ ಕುಟುಂಬದ ಮೂಲಗಳು ಹೇಳಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರವಾದ ಹತ್ತಿಕ್ಕಲು ಆಡ್ವಾಣಿ ದುರ್ಬಲ: ಸೋನಿಯಾ
ಜೈ ಹೋಗೆ ಆಸ್ಕರ್ ಅರ್ಹತೆಯಿಲ್ಲ: ಜಗ್ಜಿತ್ ಸಿಂಗ್
ಅಫ್ಜಲ್‌ಗಿಂತ ಮೊದಲು ಗಲ್ಲಿಗೇರಲು 21 ಮಂದಿ ಬಾಕಿ
ಅಮರ್ ಸಿಂಗ್‌ರಿಂದ ಪಕ್ಷತೊರೆಯುವ ಬೆದರಿಕೆ
ಟೈಟ್ಲರ್, ಸಜ್ಜನ್ ಅಭ್ಯರ್ಥಿತನ ಮರುಪರಿಶೀಲನೆ
ಉಗ್ರವಾದ ಹತ್ತಿಕ್ಕಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ: ಚಿದು