ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಕ್ರಮ ನುಸುಳುವಿಕೆಯ ಮೇಲೆ ಕಣ್ಣಿಡಲು ಉಪಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ರಮ ನುಸುಳುವಿಕೆಯ ಮೇಲೆ ಕಣ್ಣಿಡಲು ಉಪಗ್ರಹ
ಭಾರತವು ತನ್ನ ಉಪಗ್ರಹ ಉಡ್ಡಯನ ಕೇಂದ್ರದಿಂದ ಎಪ್ರಿಲ್ 20ರಂದು ಬೇಹುಗಾರಿಕಾ ಉಪಗ್ರಹ ಒಂದನ್ನು ಉಡಾಯಿಸಲಿದ್ದು, ಇದು ಇಪ್ಪತ್ತನಾಲ್ಕು ಗಂಟೆಯೂ ತನ್ನ ಗಡಿಪ್ರದೇಶಗಳ ಮೇಲೆ ಕಣ್ಣಿರಿಸಿ, ಅಕ್ರಮ ನುಸುಳುವಿಕೆ ವಿರೋಧಿ ಹಾಗೂ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಸರ್ಕಾರಕ್ಕೆ ಸಹಾಯ ಮಾಡಲಿದೆ.

300 ಕೆಜೆ ತೂಕದ ರಾಡಾರ್ ಪ್ರತಿಬಿಂಬ ತೆಗೆಯಬಲ್ಲಂತಹ ಈ ಉಪಗ್ರವನ್ನು ಇಸ್ರೇಲ್‌ನಲ್ಲಿ ನಿರ್ಮಿಸಲಾಗಿದೆ. ಇದನ್ನು ದೇಶಿ ನಿರ್ಮಿತ ರಾಕೆಟ್ ಪಿಎಸ್ಎಲ್‌ವಿ ಹೊತ್ತೊಯ್ಯಲಿದೆ.

ದೂರಸಂವೇದಿ ಛಾಯಾಚಿತ್ರ ಗ್ರಾಹಕ ಸಾಮರ್ಥ್ಯದ ಅತ್ಯಾಧುನಿಕ ಉಪಗ್ರಹವು, ಭೂಮಿಯಿಂದ 550 ಕಿಮೀ ಎತ್ತರದಲ್ಲಿ ಕಾರ್ಯಾಚರಿಸಲಿದ್ದು, ಎಲ್ಲಾ ಹವಾಮಾನಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಉಪಗ್ರಹವು ಹಗಲು ರಾತ್ರಿ ಹಾಗೂ ಎಲ್ಲಾ ಕಾಲದಲ್ಲಿಯೂ ಮೋಡ ಮುಸುಕಿದ್ದರೂ ಚಿತ್ರಗಳನ್ನು ತೆಗೆಯ ಬಲ್ಲಂತಹ ಸಿಂಥೆಟಿಕ್ ಅಪರ್ಚರ್ ರಾಡಾರ್(ಎಸ್ಎಆರ್) ಪೇಲೋಡ್ ಅನ್ನು ಉಪಗ್ರಹ ಹೊತ್ತೊಯ್ಯಲಿದೆ.

ಪರಿಸ್ಥಿತಿಯ ಸೂಕ್ಷ್ಮತೆಯ ಹಿನ್ನೆಲೆಯಲ್ಲಿ ಈ ಸಾಹಸದ ಕುರಿತು ಇಸ್ರೋ ಹೆಚ್ಚಿನ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದೆ. ಈ ಉಪಗ್ರಹವು ಎಲ್ಲಾ ಕಾಲದಲ್ಲಿಯೂ ಕಾರ್ಯ ಎಸಗುವ ಸಾಮರ್ಥ್ಯ ಇರುವುದು ಇದರ ವಿಶೇಷತೆ ಎಂಬುದಾಗಿ ಹೆಸರು ಹೇಳಲಿಚ್ಚಿಸದ ಅಧಿಕಾರಿ ತಿಳಿಸಿದ್ದಾರೆ.

ಇದನ್ನು ರಕ್ಷಣಾ ಕಾರ್ಯ ಮತ್ತು ವಿಚಕ್ಷಣ ಕಾರ್ಯಕ್ಕಾಗಿ ಬಳಸಲಾಗುತ್ತದೆ. ಇಗು ನೈಸರ್ಗಿಕ ವಿಕೋಪಗಳು ಹಾಗೂ ಕೃಷಿ ಸಂಬಂಧಿ ಕಾರ್ಯಗಳಿಗೂ ಉಪಯುಕ್ತವಾಗಲಿದೆ.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೈಟ್ಲರ್ ದೋಷಮುಕ್ತಿ: ಪಂಜಾಬ್‌ನಾದ್ಯಂತ ಪ್ರತಿಭಟನೆ
21ನೆ ಶತಮಾನ ಭಾರತದ್ದಾಗಿಸುವೆ: ಆಡ್ವಾಣಿ
ಯುಪಿಯಲ್ಲಿ ವಿಧ್ವಂಸಕ ಕೃತ್ಯನಡೆದರೆ ಆಯೋಗ ಹೊಣೆ: ಮಾಯಾ
ವರುಣ್‌ರನ್ನು ಮಾಯಾ ಉಗ್ರನಂತೆ ನಡೆಸಿಕೊಳ್ಳುತ್ತಿದ್ದಾರೆ: ಬಿಜೆಪಿ
ಮಾಧ್ಯಮಗಳ ಲೆಕ್ಕ ಪತ್ರ ತನಿಖೆಯಾಗಲಿ: ಬಿಜೆಪಿ
ರಾಷ್ಟ್ರದೊಳಗೆ ತಾಲಿಬಾನಿಗಳ ನುಸುಳುವಿಕೆ?