ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಧಾನಿ ಅಭ್ಯರ್ಥಿ ಆಡ್ವಾಣಿ ಆಸ್ತಿ 3.5 ಕೋಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಅಭ್ಯರ್ಥಿ ಆಡ್ವಾಣಿ ಆಸ್ತಿ 3.5 ಕೋಟಿ
PIB
ರಾಷ್ಟ್ರದ ಭಾವೀ ಪ್ರಧಾನಿ ಎಂದು ಎನ್‌ಡಿಎ ಬಿಂಬಿಸಿರುವ ಎಲ್.ಕೆ. ಆಡ್ವಾಣಿ ಮ‌ೂರೂವರೆ ಕೋಟಿ ರೂಪಾಯಿ ಆಸ್ತಿ ಒಡೆಯರು. ಇದರಲ್ಲಿ ಗುರ್ಗಾಂವ್‌ನಲ್ಲಿ ಎರಡು ಫ್ಲಾಟ್‌ಗಳು ಮತ್ತು ಗಾಂಧಿನಗರದಲ್ಲಿ ಒಂದು ಮನೆ ಸೇರಿದೆ.

ಬುಧವಾರ ಅವರು ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಹೇಳಿರುವಂತೆ ಅವರ ಬಳಿ ಸ್ವಂತ ಕಾರಿಲ್ಲ. ಅವರ ಎರಡು ಪ್ಲಾಟ್‌ಗಳು ತಲಾ 92.5 ಲಕ್ಷ ಬೆಲೆಬಾಳುತ್ತಿದ್ದರೆ, ಗಾಂಧಿನಗರದ ಮನೆ 50 ಲಕ್ಷ ಮೌಲ್ಯದ್ದು.

ಇದಲ್ಲದೆ ಅವರ ಬಳಿ 67.56 ಲಕ್ಷ ರೂಪಾಯಿ ಠೇವಣಿ ಇದೆ. ಅವರ ಪತ್ನಿ 36.56 ಲಕ್ಷ ರೂಪಾಯಿ ಠೇವಣಿ ಹೊಂದಿದ್ದಾರೆ. ಇದಲ್ಲದೆ, ಆಡ್ವಾಣಿ ಹಾಗೂ ಅವರ ಪತ್ನಿ ಜಂಟಿಯಾಗಿ 16 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದು, ಇದರಲ್ಲಿ ಶೇ.10 ರಷ್ಟು ಇವರದ್ದಾದರೆ, ಉಳಿದದ್ದು ಅವರ ಪತ್ನಿಯದ್ದು. ಆಡ್ವಾಣಿಯವರ ಕೈಯಲ್ಲಿ 20 ಸಾವಿರ ನಗದು ಇದ್ದರೆ, ಪತ್ನಿಯ ಬಳಿ ಐದು ಸಾವಿರ ರೂಪಾಯಿ ಇದೆ. ಆಡ್ವಾಣಿಯವರು ಯಾವುದೇ ಸಾಲಹೊಂದಿಲ್ಲ.

ತನ್ನ ವಿರುದ್ಧ ಬಾಬ್ರಿ ಮಸೀದಿ ಪ್ರಕರಣ ಬಾಕಿಇದೆ ಎಂದು ಅವರು ಅಫಿದಾವಿತ್‌ನಲ್ಲಿ ಹೇಳಿದ್ದಾರೆ. 2004ರ ಚುನಾವಣೆಯ ವೇಳೆ ಅವರು ತಮ್ಮ ಆಸ್ತಿ 1.30 ಕೋಟಿ ಎಂದು ಘೋಷಿಸಿದ್ದರು. ಅಲ್ಲದೆ ತನ್ನ ಹೆಸರಿನಲ್ಲಿ 12,28,087 ರೂಪಾಯಿ ಠೇವಣಿ ಹಾಗೂ ಪತ್ನಿಯ ಹೆಸರಲ್ಲಿ 11,19,356 ರೂಪಾಯಿ ಠೇವಣಿ ಘೋಷಿಸಿದ್ದರು. ಅಲ್ಲದೆ, ಏಳು ಲಕ್ಷ ರೂಪಾಯಿ ಆಭರಣ ಹೊಂದಿರುವುದಾಗಿ ಹೇಳಿದ್ದರು. ಆ ವೇಳೆ ಅವರು ಹೊಂದಿದ್ದ ಮ‌ೂರು ಮನೆಗಳ ಬೆಲೆ ಒಟ್ಟು 85 ಲಕ್ಷ ಎಂದು ಘೋಷಿಸಿದ್ದರು. ಆ ಸಂದರ್ಭದಲ್ಲಿ ತಾನು ಐಡಿಬಿಐ ಬ್ಯಾಂಕಿನಲ್ಲಿ 5.54ಲಕ್ಷ ರೂಪಾಯಿ ಸಾಲ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ಹೇಳಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಕ್ರಮ ನುಸುಳುವಿಕೆಯ ಮೇಲೆ ಕಣ್ಣಿಡಲು ಉಪಗ್ರಹ
ಟೈಟ್ಲರ್ ದೋಷಮುಕ್ತಿ: ಪಂಜಾಬ್‌ನಾದ್ಯಂತ ಪ್ರತಿಭಟನೆ
21ನೆ ಶತಮಾನ ಭಾರತದ್ದಾಗಿಸುವೆ: ಆಡ್ವಾಣಿ
ಯುಪಿಯಲ್ಲಿ ವಿಧ್ವಂಸಕ ಕೃತ್ಯನಡೆದರೆ ಆಯೋಗ ಹೊಣೆ: ಮಾಯಾ
ವರುಣ್‌ರನ್ನು ಮಾಯಾ ಉಗ್ರನಂತೆ ನಡೆಸಿಕೊಳ್ಳುತ್ತಿದ್ದಾರೆ: ಬಿಜೆಪಿ
ಮಾಧ್ಯಮಗಳ ಲೆಕ್ಕ ಪತ್ರ ತನಿಖೆಯಾಗಲಿ: ಬಿಜೆಪಿ