ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಧಾನಿ ಪ್ರಯಾಣ ವೆಚ್ಚ 234 ಕೋಟಿ ರೂಪಾಯಿಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಪ್ರಯಾಣ ವೆಚ್ಚ 234 ಕೋಟಿ ರೂಪಾಯಿಗಳು
PTI
ಪ್ರಧಾನಿ ಮನಮೋಹನ್ ಸಿಂಗ್ ಅವರು ವಿದೇಶದಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿದ್ದಾರೆ. ಸರಳ ಸುಶಿಕ್ಷಿತ ಎಂದು ಕರೆಸಿಕೊಳ್ಳುವ ಪ್ರಧಾನಿಯವರು ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಆದರೆ ವಿಶ್ವದ ನಾಯಕರನ್ನು ಭೇಟಿಯಾಗಲು ತೆರಳುವ ಇವರ ಖರ್ಚುವೆಚ್ಚ ಅಷ್ಟೊಂದು ಸರಳವಲ್ಲ.

ಕಳೆದ ಐದು ವರ್ಷಗಳಲ್ಲಿ ಅವರ ವಿದೇಶಿ ಪ್ರಯಾಣದ ಖರ್ಚುವೆಚ್ಚ 233.8 ಕೋಟಿ ರೂಪಾಯಿಗಳು. ಮಾಹಿತಿ ಹಕ್ಕು ಕಾಯ್ದೆಯನ್ವಯ ಕೇಳಲಾಗಿರುವ ಪ್ರಶ್ನೆಗೆ ಸರ್ಕಾರ ನೀಡಿರುವ ಉತ್ತರವು ಈ ಮಾಹಿತಿ ನೀಡಿದೆ. ಈ ಹಿಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಯಪೇಯಿ ಅವರ ವಿದೇಶಿ ಪ್ರವಾಸದ ಮೊತ್ತ 185.60 ಕೋಟಿ ರೂಪಾಯಿ.

ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ಸಿಂಗ್ ಪ್ರಯಾಣದ ವೆಚ್ಚವು ಕಡಿಮೆ ಅನ್ನಿಸಿದರೂ, ನಗಣ್ಯ ಮೊತ್ತವಲ್ಲ. ಸಿಂಗ್ ಅವರ ಸುದೀರ್ಘ ಪ್ರಯಾಣವು ಹೆಚ್ಚು ವೆಚ್ಚದಾಯಕ. 2006ರಲ್ಲಿ ಅವರು ಬ್ರೆಜಿಲ್ ಮತ್ತು ಕ್ಯೂಬಾಗೆ ಪ್ರಯಾಣ ಕೈಗೊಂಡಿದ್ದಾಗ ಸರ್ಕಾರಿ ಬೊಕ್ಕಸದಿಂದ 15.89 ಕೋಟಿ ರೂಪಾಯಿ ಖರ್ಚಾಗಿತ್ತು. ಅಮೆರಿಕದಂತಹ ರಾಷ್ಟ್ರಗಳಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಅಧ್ಯಕ್ಷರ ಭದ್ರತೆಗಾಗಿ ಬಳಸಲಾಗುತ್ತದೆ.

2005ರಲ್ಲಿ ಕೈಗೊಂಡಿದ್ದ ಫ್ರಾನ್ಸ್, ಅಮೆರಿಕ ಮತ್ತು ಜರ್ಮನಿ ಪ್ರವಾಸದ ಖರ್ಚು 13.4 ಕೋಟಿ. ಬ್ರಿಟನ್ ಮತ್ತು ಅಮೆರಿಕ ಭೇಟಿಯ ಬಿಲ್ 11.9ಕೋಟಿ. ಏರ್ ಇಂಡಿಯಾ ವಿಮಾನಗಳಿಗೆ ನೀಡಿರುವ ಬಾಡಿಗೆಯನ್ವಯ ವೆಚ್ಚವನ್ನು ಲೆಕ್ಕಹಾಕಲಾಗಿದೆ ಎಂದು ಸರ್ಕಾರದಿಂದ ಮಾಹಿತಿ ಕೋರಿರುವ ಚೇತನ್ ಕೊಠಾರಿ ಹೇಳಿದ್ದಾರೆ.

ಇಂತಹ ಭೇಟಿಗಳ ವೇಳೆಗೆ ಪ್ರಧಾನಿ ಕುಟುಂಬವೂ ಅವರೊಂದಿಗೆ ತೆರಳಿತ್ತು ಎಂದು ಪ್ರಧಾನಿ ಕಚೇರಿ ಹೇಳಿದೆ. 5.3ಕೋಟಿ ರೂಪಾಯಿ ಮೊತ್ತವನ್ನು ಹಾಟ್‌ಲೈನ್ ಮತ್ತು ಸಂಪರ್ಕ ಸೌಲಭ್ಯಗಳಿಗಾಗಿ ವಿನಿಯೋಗಿಸಲಾಗಿದೆ. 1.21 ಕೋಟಿ ರೂಪಾಯಿಗಳು ತುಟ್ಟಿಭತ್ಯೆ ಹಾಗೂ ಹೋಟೇಲು ವೆಚ್ಚಗಳಿಗೆ ಭರಿಸಲಾಗಿದೆ.

ಬಾಂಗ್ಲಾದೇಶದಲ್ಲಿ 2005ರಲ್ಲಿ ನಡೆದ ಸಾರ್ಕ್ ಶೃಂಗದಲ್ಲಿ ಭಾಗವಹಿಸಿದ್ದ ವೇಳೆ ಆಗಿರುವ ವೆಚ್ಚ3.70 ಕೋಟಿ ರೂಪಾಯಿ. ಕಳೆದ ಜನವರಿಯ ಮೂರು ದಿನಗಳ ಚೀನಾ ಭೇಟಿಯ ವೆಚ್ಚ 6.80 ಕೋಟಿ ರೂಪಾಯಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂತಃಸಾಕ್ಷಿಯ ಕರೆಗೆ ಓಗೊಡಲು ಟೈಟ್ಲರ್‌ಗೆ ಸೂಚನೆ
ಗಡಿಯಲ್ಲಿ ಸನ್ನದ್ಧರಾಗಿ ನಿಂತಿರುವ ಹೈಟೆಕ್ ಉಗ್ರರು
ಟೈಟ್ಲರ್ ಪ್ರಕರಣ: ಸಿಬಿಐ ನಿರ್ದೇಶಕರಿಗೆ ಪಿಎಂ ಕರೆ
ಸೋನಿಯಾಗೆ ಎಲ್‌ಟಿಟಿಇಯಿಂದ ಪ್ರಾಣ ಬೆದರಿಕೆ
ಬಿಜೆಪಿ ಪ್ರಚಾರಕ್ಕೆ ಬಂದರೆ ನ್ಯಾನೋ ಗಿಫ್ಟ್!
ಪ್ರಧಾನಿ ಅಭ್ಯರ್ಥಿ ಆಡ್ವಾಣಿ ಆಸ್ತಿ 3.5 ಕೋಟಿ