ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಮಮಂದಿರ ವಿವಾದಕ್ಕೆ ಮಾತುಕತೆಯಿಂದ ಪರಿಹಾರ ಸಾಧ್ಯ: ಕಲ್ಯಾಣ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮಮಂದಿರ ವಿವಾದಕ್ಕೆ ಮಾತುಕತೆಯಿಂದ ಪರಿಹಾರ ಸಾಧ್ಯ: ಕಲ್ಯಾಣ್
ಹಿಂದು ಮತ್ತು ಮುಸ್ಲಿಮರ ನಡುವೆ ಮಾತುಕತೆ ಮೂಲಕವೇ ರಾಮಮಂದಿರ ವಿವಾದವನ್ನು ಬಗೆಹರಿಸಬಹುದೇ ವಿನಹ ಕಾನೂನಿನ ಮುಖಾಂತರ ಅಲ್ಲ ಎಂಬುದಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಹೇಳಿದ್ದಾರೆ. ಸಿಂಗ್ ಅವರು 90ರ ದಶಕದ ಅಯೋಧ್ಯಾ ಚಳುವಳಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು.

ಇತ್ತೀಚೆಗೆ ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು ಸೇರಿರುವ ಸಿಂಗ್ 1992ರಲ್ಲಿ ಬಾಬರಿ ಮಸೀದಿ ಧ್ವಂಸದ ನೈತಿಕ ಹೊಣೆಹೊತ್ತಿದ್ದಾರೆ. ಎರಡೂ ಸಮುದಾಯದ ಭಾವನೆಗಳನ್ನು ಪರಿಗಣಿಸದೆ ಹೊಸ ಕಾನೂನನ್ನು ಜಾರಿಗೆ ತಂದರೆ ಅದು ಯಾವುದೇ ಪರಿಣಾಮ ಬೀರದು, ಇದು ಇನ್ನಷ್ಟು ಗಲಭೆಗಳಿಗೆ ಕಾರಣವಾಗಬಹುದು ಹಾಗೂ ರಾಷ್ಟ್ರದಲ್ಲಿ ವಿಭಜಕ ಶಕ್ತಿಗಳನ್ನು ಹೆಚ್ಚಿಸಬಹುದು ಎಂಬುದಾಗಿ ಅವರು ಹೇಳಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ 77ರ ಹರೆಯದ ಸಿಂಗ್, ರಾಜಕೀಯ ಶಕ್ತಿಗಳಲ್ಲಿನ ಬೃಹತ್ ಮರು ಮೈತ್ರಿಗಳು ಉತ್ತರ ಭಾರತದ ರಾಜಕೀಯ ದೃಶ್ಯವನ್ನೇ ಬದಲಿಸಲಿದೆ ಹಾಗೂ ಬಿಎಸ್ಪಿ ಮತ್ತು ಬಿಜೆಪಿಗಳಿಗೆ ಭಾರೀ ಹಿನ್ನಡೆ ಉಂಟುಮಾಡಲಿದೆ ಎಂದು ಭವಿಷ್ಯ ನುಡಿದರು.

ರಾಮಮಂದಿರವನ್ನು ನಿರ್ಮಿಸುವ ಭರವಸೆ ನೀಡಿರುವ ಬಿಜೆಪಿಗೆ, ಎನ್‌ಡಿಎ ಮೈತ್ರಿಕೂಟದ ಹೆಚ್ಚಿನ ಪಕ್ಷಗಳು ಇದನ್ನು ವಿರೋಧಿಸುವುದು ತಿಳಿದಿದೆ. ಬಿಜೆಪಿಯು ನಕಲಿ ಪ್ರಣಾಳಿಯನ್ನು ಪ್ರಸ್ತುತ ಪಡಿಸಿದ್ದು, ಅದು ಅಧಿಕಾರಕ್ಕೆ ಬಂದರೆ ಎನ್‌ಡಿಎ ಕಾರ್ಯಸೂಚಿಗೆ ಅಂಟಿಕೊಳ್ಳಲಿದೆ ಎಂದು ಅವರು ವ್ಯಂಗ್ಯವಾಡಿದರು.

ರಾಮಮಂದಿರ ನಿರ್ಮಾಣ ಸೇರಿದಂತೆ ಬಿಜೆಪಿಯು ಇನ್ನೂ ಭಾವನಾತ್ಮಕ ವಿಚಾರಗಳನ್ನೇ ಎತ್ತುತ್ತಿದೆ. ಆದರೆ, ಕೇಂದ್ರದಲ್ಲಿ ಆರುವರ್ಷಗಳಿಗೂ ಹೆಚ್ಚುಕಾಲ ಆಡಳಿತ ಹೊಂದಿದ್ದ ವೇಳೆ ಪಕ್ಷವು ಏನು ಮಾಡುತ್ತಿತ್ತು ಎಂಬುದಾದಿ ಈ ದೇಶದ ಜನತೆ ಕೇಳುತ್ತಿದ್ದಾರೆ ಎಂದು ಅವರು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಧಾನಿ ಪ್ರಯಾಣ ವೆಚ್ಚ 234 ಕೋಟಿ ರೂಪಾಯಿಗಳು
ಅಂತಃಸಾಕ್ಷಿಯ ಕರೆಗೆ ಓಗೊಡಲು ಟೈಟ್ಲರ್‌ಗೆ ಸೂಚನೆ
ಗಡಿಯಲ್ಲಿ ಸನ್ನದ್ಧರಾಗಿ ನಿಂತಿರುವ ಹೈಟೆಕ್ ಉಗ್ರರು
ಟೈಟ್ಲರ್ ಪ್ರಕರಣ: ಸಿಬಿಐ ನಿರ್ದೇಶಕರಿಗೆ ಪಿಎಂ ಕರೆ
ಸೋನಿಯಾಗೆ ಎಲ್‌ಟಿಟಿಇಯಿಂದ ಪ್ರಾಣ ಬೆದರಿಕೆ
ಬಿಜೆಪಿ ಪ್ರಚಾರಕ್ಕೆ ಬಂದರೆ ನ್ಯಾನೋ ಗಿಫ್ಟ್!