ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಟೈಟ್ಲರ್ ಪ್ರಕರಣ ವಿಚಾರಣೆ ಮುಂದಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೈಟ್ಲರ್ ಪ್ರಕರಣ ವಿಚಾರಣೆ ಮುಂದಕ್ಕೆ
ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿರುವ ಕುರಿತ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಒಂದು ಗುರುವಾರ ಮುಂದೂಡಿದೆ. ಮುಂದಿನ ವಿಚರಾಣಯನ್ನು ಎಪ್ರಿಲ್ 28 ಮತ್ತು 29ಕ್ಕೆ ಮುಂದೂಡಿದೆ.

1984ರ ನವೆಂಬರ್ 1ರಂದು ನಡೆದ ಗಲಭೆಯ ವೇಳೆಗೆ ತಾನು ಗುರುದ್ವಾರದ ಬಳಿಯಲ್ಲಿ ಇರಲಿಲ್ಲ ಎಂಬುದನ್ನು ಸಾಬೀತು ಪಡಿಸಲು ಟೈಟ್ಲರ್ ಸಲ್ಲಿಸಿದ್ದಾರೆಂದು ಹೇಳಲಾಗಿರುವ ಸಿಡಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸಿಬಿಐಗೆ ಸೂಚಿಸಿದೆ.

ಪ್ರಕರಣದ ವಿಚಾರಣಾ ಪ್ರಕ್ರಿಯೆ ಆರಂಭಗೊಳ್ಳುತ್ತಿರುವಂತೆ, ಅಡಿಷನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಈ ಪ್ರಕರಣವನ್ನು ವಿಚಾರಿಸುವ ಹಕ್ಕಿಲ್ಲ, ವಿಶೇಷ ನ್ಯಾಯಾಲಯಕ್ಕೆ ಮಾತ್ರ ಈ ಹಕ್ಕಿದೆ ಎಂದು ಸಿಬಿಐ ವಕೀಲರು ವಾದಿಸಿದರು.

ಆದರೆ, ಸಿಖ್ ನರಮೇಧ ಬಲಿಪಶುಗಳ ವಕೀಲರು ಸಿಬಿಐ ನಿಲುವನ್ನು ಬಲವಾಗಿ ವಿರೋಧಿಸಿದ್ದು, ಇದೇ ನ್ಯಾಯಾಲಯವು ಡಿಸೆಂಬರ್ 2007ರಲ್ಲಿ ಪ್ರಕರಣವನ್ನು ವಿಚಾರಿಸುವಂತೆ ಸಿಬಿಐಗೆ ಆದೇಶ ನೀಡಿದ್ದು, ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಟೈಟ್ಲರ್ ವಿಚಾರಣೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಅಪಾರ ಸಂಖ್ಯೆಯ ಸಿಖ್ ಸಮುದಾಯದ ಮಂದಿ ಜಮಾಯಿಸಿದ್ದರು. ಇವರು ಟೈಟ್ಲರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಮಮಂದಿರ ವಿವಾದಕ್ಕೆ ಮಾತುಕತೆಯಿಂದ ಪರಿಹಾರ ಸಾಧ್ಯ: ಕಲ್ಯಾಣ್
ಪ್ರಧಾನಿ ಪ್ರಯಾಣ ವೆಚ್ಚ 234 ಕೋಟಿ ರೂಪಾಯಿಗಳು
ಅಂತಃಸಾಕ್ಷಿಯ ಕರೆಗೆ ಓಗೊಡಲು ಟೈಟ್ಲರ್‌ಗೆ ಸೂಚನೆ
ಗಡಿಯಲ್ಲಿ ಸನ್ನದ್ಧರಾಗಿ ನಿಂತಿರುವ ಹೈಟೆಕ್ ಉಗ್ರರು
ಟೈಟ್ಲರ್ ಪ್ರಕರಣ: ಸಿಬಿಐ ನಿರ್ದೇಶಕರಿಗೆ ಪಿಎಂ ಕರೆ
ಸೋನಿಯಾಗೆ ಎಲ್‌ಟಿಟಿಇಯಿಂದ ಪ್ರಾಣ ಬೆದರಿಕೆ