ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಿವಾಹ ವೆಬ್‌ಸೈಟಿನಿಂದ ಮಾಹಿತಿ ಕದಿಯುತ್ತಿದ್ದ ಉಗ್ರರು!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿವಾಹ ವೆಬ್‌ಸೈಟಿನಿಂದ ಮಾಹಿತಿ ಕದಿಯುತ್ತಿದ್ದ ಉಗ್ರರು!
ವಿವಾಹಪೇಕ್ಷಿತ ವಧೂವರರು ನೀಡುವ ಮಾಹಿತಿಗಳನ್ನು ಕದ್ದು, ನಕಲಿ ಗುರುತು ಚೀಟಿ ಮಾಡಿಸಿಕೊಳ್ಳಲು ಉಗ್ರರು ಬಳಸಿಕೊಳ್ಳುತ್ತಿದ್ದರು ಎಂಬ ಆಘಾತಕಾರಿ ವಿಚಾರವು ಬೆಳಕಿಗೆ ಬಂದಿದೆ. ಉಗ್ರಗಾಮಿ ಸಂಘಟನೆಗಳಲ್ಲೊಂದಾಗಿರುವ ಇಂಡಿಯನ್ ಮುಜಾಹಿದೀನ್(ಐಎಂ)ನ ಸದಸ್ಯರಲ್ಲೊಬ್ಬ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ವೈವಾಹಿಕ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗುವ ಮಾಹಿತಿಗಳು ಮತ್ತು ಭಾವಚಿತ್ರಗಳನ್ನು ವಿದ್ಯಾರ್ಥಿ ಗುರುತು ಚೀಟಿ ಪಡೆಯಲು ಬಳಸಿದ್ದು, ಬಳಿಕ ಈ ಗುರುತು ಚೀಟಿಗಳನ್ನು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಳಸಲಾಗುತ್ತಿತ್ತು ಎಂದು ತಿಳಿಸಿದ್ದಾನೆ.

ಅನಿಕ್ ಸಯ್ಯಿದ್(27), ಎಂಬಾತ 2008ರ ಅಕ್ಟೋಬರ್‌ನಲ್ಲಿ ಮ್ಯಾಜೆಸ್ಟ್ರೀಟ್ ಎದುರು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದ್ದಾನೆನ್ನಲಾಗಿದೆ. ವೈವಾಹಿಕ ವೆಬ್‌ಸೈಟ್‌ಗಳಿಂದ ಭಾವಚಿತ್ರಗಳನ್ನು ಡೌನ್ ಲೋಡ್ ಮಾಡಿ ಅವುಗಳನ್ನು ನಕಲಿ ದಾಖಲೆ ಸೃಷ್ಟಿಸಲು ಬಳಸಿಕೊಂಡಿರುವುದಾಗಿ ಹೇಳಿದ್ದಾನೆ.

"ಗೂಗಲ್‌ನಲ್ಲಿ ಮ್ಯಾಟ್ರಿಮೊನಿ ಎಂದು ಟೈಪ್ ಮಾಡಿದ ವೇಳೆ ಅಪಿಯರ್ ಆಗುರತ್ತಿದ್ದ ವೆಬ್ ಸೈಟ್‌ಗಳನ್ನು ಓಪನ್ ಮಾಡಿ, ಈ ಸೈಟ್‌ಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಿರುವ ಪುರುಷರ ಫೋಟೋಗಳನ್ನು ಡೌನ್‌ಲೋಡ್ ಮಾಡುತ್ತಿದ್ದೆ. ಬಳಿಕ ಕೋರೆಲ್‌ಡ್ರಾ ಮತ್ತು ಅಡೋಬ್ ಪೋಟೋಶಾಪ್‌ಗಳಲ್ಲಿ ಅವುಗಳನ್ನು ಎಡಿಟ್ ಮಾಡಿ ಇತರ ದಾಖಲೆಗಳಿಗೆ ಅಂಟಿಸುತ್ತಿದ್ದೆ" ಎಂದು ಅನಿಕ್ ಹೇಳಿದ್ದಾನೆ.

ಅಲ್ಲದೆ, ಈತ ತಾನು ಬಿಎಸ್ಸೆನ್ನೆಲ್ ಟೆಲಿಫೋನ್ ಡೈರೆಕ್ಟರಿಯಿಂದ ಮಾಹಿತಿ ಪಡೆದು ಇವುಗಳಲ್ಲಿ ನಮೂದಾಗಿರುವ ವಿಳಾಸಗಳನ್ನು ಬಳಸಿ ಸಿಮ್ ಕಾರ್ಡ್‌ಗಳನ್ನು ಖರೀದಿಸುತ್ತಿದ್ದೆ ಎಂದು ಹೇಳಿದ್ದಾನೆ. ಅನಿಕ್‌ನನ್ನು ಕಳೆದ ವರ್ಷ ಮುಂಬೈ ಕ್ರೈಂ ಬ್ರಾಂಚ್‌ ಬಂಧಿಸಿದೆ.

ಬಂಧನಕ್ಕೀಡಾಗಿರುವ ಇಂಡಿಯನ್ ಮುಜಾಹಿದ್ದೀನ್‌ನ 21 ಮಂದಿಯಲ್ಲಿ ಏಳು ಮಂದಿಯ ಹೇಳಿಕೆಗಳನ್ನು ವಿಶೇಷ ಮೋಕಾ ನ್ಯಾಯಾಲಯವು ಬುಧವಾರ ತೆರೆಸಿದ್ದು, ಇದರ ಪ್ರತಿಗಳನ್ನು ಇತರ ಆರೋಪಿಗಳಿಗೆ ನೀಡಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೈಟ್ಲರ್ ಪ್ರಕರಣ ವಿಚಾರಣೆ ಮುಂದಕ್ಕೆ
ರಾಮಮಂದಿರ ವಿವಾದಕ್ಕೆ ಮಾತುಕತೆಯಿಂದ ಪರಿಹಾರ ಸಾಧ್ಯ: ಕಲ್ಯಾಣ್
ಪ್ರಧಾನಿ ಪ್ರಯಾಣ ವೆಚ್ಚ 234 ಕೋಟಿ ರೂಪಾಯಿಗಳು
ಅಂತಃಸಾಕ್ಷಿಯ ಕರೆಗೆ ಓಗೊಡಲು ಟೈಟ್ಲರ್‌ಗೆ ಸೂಚನೆ
ಗಡಿಯಲ್ಲಿ ಸನ್ನದ್ಧರಾಗಿ ನಿಂತಿರುವ ಹೈಟೆಕ್ ಉಗ್ರರು
ಟೈಟ್ಲರ್ ಪ್ರಕರಣ: ಸಿಬಿಐ ನಿರ್ದೇಶಕರಿಗೆ ಪಿಎಂ ಕರೆ