ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ಯಾಂಟ್ ಪ್ರಕರಣ: ಟ್ವಿಂಕಲ್ ಖನ್ನಾ ಬಂಧನ, ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ಯಾಂಟ್ ಪ್ರಕರಣ: ಟ್ವಿಂಕಲ್ ಖನ್ನಾ ಬಂಧನ, ಬಿಡುಗಡೆ
ಕಳೆದ ಕೆಲ ದಿನಗಳ ಹಿಂದೆ ಫ್ಯಾಶನ್ ಶೋ ಒಂದರಲ್ಲಿ ತನ್ನ ಗಂಡ, ನಟನಾಗಿರುವ ಅಕ್ಷಯ್ ಕುಮಾರ್ ಪ್ಯಾಂಟ್‌ನ ಗುಂಡಿಯನ್ನು ಸಾರ್ವಜನಿಕವಾಗಿ ಬಿಚ್ಚಿ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಂಕಲ್ ಖನ್ನಾರನ್ನು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಲ್ಯಾಕ್ಮೆ ಫ್ಸಾಶನ್ ಸಪ್ತಾಹದಂಗವಾಗಿ ಮಾರ್ಚ್ 30ರಂದು ನಡೆದ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅಶ್ಲೀಲವಾಗಿ ನಡೆದುಕೊಂಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಅನಿಲ್ ನಾಯರ್ ಎಂಬವರು ದೂರು ಸಲ್ಲಿಸಿದ್ದರು. ಈ ಸಂಬಂಧ ಗುರುವಾರ ತನ್ನ ವಕೀಲರೊಂದಿಗೆ ವಕೋಲಾ ಪೊಲೀಸ್ ಠಾಣೆಗಾಗಮಿಸಿದ ಟ್ವಿಂಕಲ್ ಖನ್ನಾ ಶರಣಾಗಿದ್ದಾರೆ.

ಕೆಲ ಗಂಟೆಗಳಷ್ಟು ಹೊತ್ತು ಪೊಲೀಸ್ ಠಾಣೆಯಲ್ಲಿ ಕಳೆದ ಟ್ವಿಂಕಲ್ ನಂತರ 950 ರೂಪಾಯಿಗಳ ಜಾಮೀನಿನೊಂದಿಗೆ ಬಿಡುಗಡೆಯಾದರು. ತನ್ನ ಗಂಡ ಅಕ್ಷಯ್ ಕುಮಾರ್ ಈ ವಾರಾಂತ್ಯದಲ್ಲಿ ಮುಂಬೈಗೆ ಬರಲಿದ್ದು, ನಂತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಪೊಲೀಸರಿಗೆ ಟ್ವಿಂಕಲ್ ತಿಳಿಸಿದ್ದಾರೆ. ಸೋಮವಾರದೊಳಗೆ ಅಕ್ಷಯ್ ಕುಮಾರ್ ಪೊಲೀಸರಿಗೆ ಶರಣಾಗಬಹುದು ಎಂದು ನಿರೀಕ್ಷಿಸಲಾಗಿದೆ.

"ಇದು ಜಾಮೀನು ನೀಡಬಹುದಾದ ಅಪರಾಧ. ಹಾಗಾಗಿ ಆಕೆಯನ್ನು 950 ರೂಪಾಯಿಗಳ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೇವೆ. ಅಕ್ಷಯ್ ಕುಮಾರ್‌ಗಾಗಿ ನಾವೀಗ ಕಾಯುತ್ತಿದ್ದೇವೆ" ಎಂದು ವಕೋಲಾ ವಲಯ ಎಸಿಪಿ ಅರವಿಂದ್ ಮಹಾಬ್ದಿ ತಿಳಿಸಿದ್ದಾರೆ.

ಲೆವಿಸ್ ಜೀನ್ಸ್‌ನ ರಾಯಭಾರಿಯಾಗಿರುವ ಅಕ್ಷಯ್ ಗ್ರಾಂಡ್ ಹೈಟ್ ಸಾಂತಾ ಕ್ರೂಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದಾಗ ತನ್ನ ಪತ್ನಿ ಟ್ವಿಂಕಲ್ ಖನ್ನಾರಿಗೆ ಪ್ಯಾಂಟಿನ ಗುಂಡಿ ಬಿಚ್ಚುವಂತೆ ಕೋರಿದ್ದರು. ಅದರಂತೆ ಟ್ವಿಂಕಲ್ ಸಾರ್ವಜನಿಕವಾಗಿ ಪ್ಯಾಂಟಿನ ಗುಂಡಿ ಬಿಚ್ಚಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೊನೆಗೂ ಅಭ್ಯರ್ಥಿತನ ಹಿಂತೆಗೆದ ಜಗದೀಶ್ ಟೈಟ್ಲರ್
ವಿವಾಹ ವೆಬ್‌ಸೈಟಿನಿಂದ ಮಾಹಿತಿ ಕದಿಯುತ್ತಿದ್ದ ಉಗ್ರರು!
ಟೈಟ್ಲರ್ ಪ್ರಕರಣ ವಿಚಾರಣೆ ಮುಂದಕ್ಕೆ
ರಾಮಮಂದಿರ ವಿವಾದಕ್ಕೆ ಮಾತುಕತೆಯಿಂದ ಪರಿಹಾರ ಸಾಧ್ಯ: ಕಲ್ಯಾಣ್
ಪ್ರಧಾನಿ ಪ್ರಯಾಣ ವೆಚ್ಚ 234 ಕೋಟಿ ರೂಪಾಯಿಗಳು
ಅಂತಃಸಾಕ್ಷಿಯ ಕರೆಗೆ ಓಗೊಡಲು ಟೈಟ್ಲರ್‌ಗೆ ಸೂಚನೆ