ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಸ್ಸಾಂ ರೈಲಿಗೆ ಉಗ್ರರ ದಾಳಿ: ಒಂದು ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸ್ಸಾಂ ರೈಲಿಗೆ ಉಗ್ರರ ದಾಳಿ: ಒಂದು ಸಾವು
ಪ್ರಯಾಣಿಕ ರೈಲೊಂದಕ್ಕೆ ಪ್ರತ್ಯೇಕತಾವಾದಿ ಬುಡಕಟ್ಟು ಗುಂಪೊಂದು ದಾಳಿ ನಡೆಸಿದ ಪರಿಣಾಮ ಪ್ಯಾರಾಮಿಲಿಟರಿ ಸೈನಿಕನೊಬ್ಬ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡ ಘಟನೆ ಅಸ್ಸಾಂನಲ್ಲಿ ಶುಕ್ರವಾರ ನಡೆದಿದೆ.

ನಿಷೇಧಿತ ಸಂಘಟನೆ ದಿಮಾ ಹೋಲಮ್ ದೋಗಾ (ಡಿಎಚ್‌ಡಿ)ಯ ಮತ್ತೊಂದು ವಿಭಾಗವಾಗಿರುವ ಜುವೆಲ್ ಗಾರ್ಸೋಸಾ ಎಂಬ 'ಬ್ಲಾಕ್ ವಿಡೋ' ಎಂದೇ ಖ್ಯಾತಿ ಪಡೆದಿರುವ ಸಂಘಟನೆ ಈ ದಾಳಿ ನಡೆಸಿದೆ.

ಅಸ್ಸಾಂನ ಪ್ರಮುಖ ನಗರ ಗುವಾಹತಿಯಿಂದ ಸುಮಾರು 380 ಕಿಲೋ ಮೀಟರ್ ದೂರವಿರುವ ಉತ್ತರ ಚಾಚರ್ ಹಿಲ್ಸ್ ಜಿಲ್ಲೆಯ ವಾದ್ರಾಂದಿಸಾ ಸ್ಟೇಷನ್ ಪಕ್ಕದಲ್ಲಿ 'ಬರಾಕ್ ವ್ಯಾಲಿ ಎಕ್ಸ್‌ಪ್ರೆಸ್‌' ಎಂಬ ಸ್ಥಳೀಯ ಪ್ರಯಾಣಿಕ ರೈಲಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ವಾದ್ರಾಂದಿಸಾ ಸ್ಟೇಷನ್ ಹತ್ತಿರ ಬರುತ್ತಿದ್ದಂತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ರೈಲನ್ನು ನಿಧಾನಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಟೇಷನ್‌ನ ಒಂದು ಬದಿಗೆ ರೈಲು ಬರುತ್ತಿದ್ದಂತೆ ಪ್ಲಾಟ್‌ಫಾರಂನಲ್ಲಿ ಹೊಂಚು ಹಾಕಿ ಕಾಯುತ್ತಿದ್ದ ಶಸ್ತ್ರಸಜ್ಜಿತ ಉಗ್ರರು ಏಕಾಏಕಿ ಗುಂಡಿನ ಮಳೆಗರೆದರು. ಅವರಲ್ಲಿ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿದ್ದವು" ಎಂದು ಘಟನಾ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಅರೆಸೇನಾಪಡೆಯ ಓರ್ವ ಸೈನಿಕ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇಬ್ಬರು ಭದ್ರತಾ ಸಿಬಂದಿ, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಗಾಯಾಳುಗಳಲ್ಲಿ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿ ಎಚ್.ಸಿ. ತಿಮಂಗ್ ಮಾಹಿತಿ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎರಡು ನಿಮಿಷಯದಲ್ಲಿ 51 ಮೆಣಸಿನಕಾಯಿ ತಿಂದ ಧೀರೆ
ಪ್ರಿಯಾಂಕಾ ಕಾಂಗ್ರೆಸ್ ಪ್ರಚಾರ ನಾಳೆಯಿಂದ ಆರಂಭ
ಕುರುಕ್ಷೇತ್ರದಲ್ಲಿ ಸಂಸದ ಜಿಂದಾಲ್‌ಗೂ ಶೂ ಎಸೆತ
ಪಕ್ಷದವರಿಂದಲೇ ನಾನು ಮೂಲೆಗುಂಪಾಗಿದ್ದೇನೆ: ಟೈಟ್ಲರ್
ಜೆಎಂಎಂ ಹಗರಣ: ದೇವೇಗೌಡ ಹಸ್ತಕ್ಷೇಪ ಬಹಿರಂಗ
ಸಿಖ್ ವಿರೋಧಿ ಗಲಭೆಗಾಗಿ ಟೈಟ್ಲರ್ ಕ್ಷಮೆಯಾಚನೆ