ಜೈಪುರ: ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ದಶಕಗಳಷ್ಟು ಹಳೆಯದಾದ ಕ್ರಿಮಿನಲ್ ಪ್ರಕರಣವೊಂದಕ್ಕೆ ಜಾಮೀನು ಪಡೆದಿದ್ದಾರೆ. 1997ರಲ್ಲಿ ಇವರು ಬಜರಂಗ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ರೈಲಿನ ತುರ್ತು ನಿಲುಗಡೆ ಸರಪಳಿಯನ್ನು ಎಳೆದಿದ್ದ ಆರೋಪ ಎದುರಿಸುತ್ತಿದ್ದರು. ಡಿಯೋಲ್ ಜತೆಗೆ ನಟಿ ಕರೀಷ್ಮಾ ಕಪೂರ್, ಸ್ಟಂಟ್ ಮಾಸ್ಟರ್ ಟೀನೂ ವರ್ಮಾ ಹಾಗೂ ಸತೀಶ್ ಶಾ ವಿರುದ್ಧವೂ ರೈಲ್ವೆ ಅಧಿಕಾರಿಗಳು ಆರೋಪ ದಾಖಲಿಸಿದ್ದರು. |