ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪುಲ್ವಾಮದಲ್ಲಿ ಭೀಕರ ಗುಂಡಿನ ಚಕಮಕಿ: ಓರ್ವ ಉಗ್ರ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುಲ್ವಾಮದಲ್ಲಿ ಭೀಕರ ಗುಂಡಿನ ಚಕಮಕಿ: ಓರ್ವ ಉಗ್ರ ಬಲಿ
ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಮನೆಯೊಂದರಲ್ಲಿ ಅವಿತು ಕುಳಿತಿರುವ ಉಗ್ರರು ಮತ್ತು ಸೇನಾಪಡೆಗಳ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದರೆ ಇತರರು ಹೋರಾಟ ಮುಂದುವರಿಸಿದ್ದಾರೆ.

ಭಾನುವಾರ ನಸುಕಿನಲ್ಲಿ ಅಲ್ಗರ್ ಗ್ರಾಮದಲ್ಲಿ ಗುಂಡಿನ ಚಕಮಕಿ ಆರಂಭಗೊಂಡಿದೆ. ಸೇನಾಪಡೆಯ ಹುಡುಕಾಟ ಕಾರ್ಯಾಚರಣೆ ವೇಳೆ ಮನೆಯೊಂದರಲ್ಲಿ ಅವಿತಿದ್ದ ಉಗ್ರರು ಸೇನಾಪಡೆಗಳತ್ತ ಗುಂಡುಹಾರಿಸಿದರು ಎಂದು ರಕ್ಷಣಾ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದು ಆತನ ಗುರುತನ್ನು ಇನ್ನಷ್ಟೆ ಪತ್ತೆಹಚ್ಚಬೇಕಿದೆ. ಉಗ್ರರು ಮತ್ತು ಸೇನಾಪಡೆಗಳ ನಡುವಿನ ಕಾಳಗ ಇನ್ನೂ ಮುಂದುವರಿದಿದೆ.

"ಉಗ್ರರು ಜೈಶೆ-ಮೊಹಮ್ಮದ್ ಸಂಘಟನೆಯವರಾಗಿಬಹುದು ಎಂಬುದಾಗಿ ಸಂಶಯಿಸಲಾಗಿದೆ" ಎಂದು ವಕ್ತಾರರು ಹೇಳಿದ್ದಾರೆ.

ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿರುವ ಪುಲ್ವಾಮ ಉಗ್ರರ ತಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಿದ್ದು, ಹಲವಾರು ಎನ್‌ಕೌಂಟರ್‌ಗಳು ಸಂಭವಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಂಗ್ ದುರ್ಬಲ, ಅಧಿಕಾರವಿಲ್ಲ: ಮತ್ತೆ ಚುಚ್ಚಿದ ಆಡ್ವಾಣಿ
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ನಾಯಕ ಲೋನ್ ಸ್ಫರ್ಧೆ
ಮತ್ತೆ ರ‌್ಯಾಗಿಂಗ್: ದೃಷ್ಟಿ ಕಳಕೊಂಡ ವಿದ್ಯಾರ್ಥಿ
ನಾನು ಮುದುಕಿಯಂತೆ ಕಾಣ್ತೀನಾ: ಪ್ರಿಯಾಂಕ ಪ್ರಶ್ನೆ
'ಪ್ರೀತಿಯ ಗುರು'ವಿಂದ ಪ್ರೇಮದ ಪಕ್ಷ, ಪ್ರೀತಿಗಾಗಿ ಹೋರಾಟ!
ಆಡ್ವಾಣಿ ಬಗ್ಗೆ ಪಿಎಂ ಹೇಳಿಕೆ ಹತಾಶೆಯ ಸಂಕೇತ: ಬಿಜೆಪಿ