ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್ ರಾಷ್ಟ್ರೀಯ ಭೀತಿ: ಯುಪಿ ಸರ್ಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್ ರಾಷ್ಟ್ರೀಯ ಭೀತಿ: ಯುಪಿ ಸರ್ಕಾರ
PTI
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವರುಣ್ ಗಾಂಧಿ ಅವರನ್ನು ಬಂಧಿಸಿರುವ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶ ಸರ್ಕಾರ, ಅವರು ರಾಷ್ಟ್ರದ ಭೀತಿ ಎಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಹೇಳಿದೆ.

ಪಿಲಿಭಿತ್ ದಂಡಾಧಿಕಾರಿಯವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಸಾರ್ವಜನಿಕ ಭೀತಿ ಎಂದು ಹೇಳಿದ್ದಾರಲ್ಲದೆ, ಇವರು ಮುಸ್ಲಿಮ್ ಸಮುದಾಯದಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವರುಣ್ ಪ್ರಕರಣವು ಸೋಮವಾರ ವಿಚಾರಣೆಗೆ ಬರಲಿದೆ.

ಈ ಮಧ್ಯೆ ವರುಣ್ ವಿರುದ್ಧ ಕಠಿಣ ಕಾಯ್ದೆಯನ್ನು ಹೇರಿರುವ ಉತ್ತರ ಪ್ರದೇಶದ ಕ್ರಮವನ್ನು ಕಟುವಾಗಿ ಖಂಡಿಸಿರುವ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಇದು ಮತದಾರರ ಧ್ರುವೀಕರಣ ತಂತ್ರವಲ್ಲದೆ ಮತ್ತೇನಲ್ಲ ಎಂದು ದೂರಿವೆ.

ಜಿಲ್ಲಾ ದಂಡಾಧಿಕಾರಿ ಅಜಯ್ ಚೌವಾಣ್ ಅವರು ಸಲ್ಲಿಸಿರುವ ಅಫಿದಾವಿತ್‌ನಲ್ಲಿ, ವರುಣ್ ಅವರ ಬಂಧನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ವರುಣ್ ಚಟುವಟಿಕೆಗಳು ಸಾರ್ವಜನಿಕ ಶಾಂತಿಗೆ ಭಂಗತರುವಂತಾಗಿದೆ ಎಂದು ಆರೋಪಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋನಿಯಾ -ಅಡ್ವಾಣಿ ಪರಸ್ಪರ ಟೀಕಾ ಪ್ರಹಾರ
ಪುಲ್ವಾಮದಲ್ಲಿ ಭೀಕರ ಗುಂಡಿನ ಚಕಮಕಿ: ಓರ್ವ ಉಗ್ರ ಬಲಿ
ಸಿಂಗ್ ದುರ್ಬಲ, ಅಧಿಕಾರವಿಲ್ಲ: ಮತ್ತೆ ಚುಚ್ಚಿದ ಆಡ್ವಾಣಿ
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ನಾಯಕ ಲೋನ್ ಸ್ಫರ್ಧೆ
ಮತ್ತೆ ರ‌್ಯಾಗಿಂಗ್: ದೃಷ್ಟಿ ಕಳಕೊಂಡ ವಿದ್ಯಾರ್ಥಿ
ನಾನು ಮುದುಕಿಯಂತೆ ಕಾಣ್ತೀನಾ: ಪ್ರಿಯಾಂಕ ಪ್ರಶ್ನೆ