ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒಂದಲ್ಲ ಒಂದಿನ ರಾಹುಲ್ ಪ್ರಧಾನಿಯಾಗ್ತಾರೆ: ಪ್ರಿಯಾಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಂದಲ್ಲ ಒಂದಿನ ರಾಹುಲ್ ಪ್ರಧಾನಿಯಾಗ್ತಾರೆ: ಪ್ರಿಯಾಂಕ
PTI
ರಾಹುಲ್ ಗಾಂಧಿ ರಾಷ್ಟ್ರದ ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ ಮತ್ತು ಅವರು ಒಂದಲ್ಲ ಒಂದು ದಿನ ಪ್ರಧಾನಿಯಾಗಲಿದ್ದಾರೆ ಎಂದು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ತನ್ನ ತಾಯಿ ಸೋನಿಯಾ ಹಾಗೂ ಸಹೋದರನ ಪರವಾಗಿ ಭರದ ಪ್ರಚಾರಕ್ಕಿಳಿದಿರುವ ಪ್ರಿಯಾಂಕ, ತನಗೇನು ರಾಜೀಯ ಜಿಗುಪ್ಸೆ ವಿಚಾರವಲ್ಲ ಆದರೆ ಇದು ತನ್ನ ಆಯ್ಕೆಯಲ್ಲ ಎಂದೂ ಹೇಳಿದ್ದಾರೆ.

"ವಯಸ್ಸಾಗುತ್ತಾ ಬರುತ್ತಿರುವಂತೆ, ಎಂದಿಗೂ ಇಲ್ಲ ಎಂಬುದಾಗಿ ಹೇಳಬಾರದು ಎಂಬುದನ್ನು ಅರಿತುಕೊಂಡಿದ್ದೇನೆ, ಎಂದಿಗೂ ರಾಜಕೀಯ ಸೇರಲಾರೆ ಎಂದು ಹೇಳಲಾರೆ, ಆದರೆ ಇದು ನನ್ನ ಇಚ್ಛೆ ಎಂಬುದಾಗಿ ನನಗನಿಸುತ್ತಿಲ್ಲ" ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ.

"ತನ್ನ ಸಹೋದರ ಕಠಿಣ ಪರಿಶ್ರಮ ಪಡುತ್ತಾನೆ. ಆತನಿಗೆ ಪ್ರಧಾನಿಯಾಗುವ ಅರ್ಹತೆ ಇದೆ. ಒಂದಲ್ಲ ಒಂದು ದಿವಸ ಆತ ಪ್ರಧಾನಿಯಾಗುವುದು ಖಚಿತ" ಎಂದು ಹೇಳಿದ ಪ್ರಿಯಾಂಕ ತಕ್ಷಣವೇ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನಮೋಹನ್ ಸಿಂಗ್ ಅವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪ್ರಿಯಾಂಕ ಹೇಳಿಕೆಯನ್ನು ತಕ್ಷಣ ಸ್ವಾಗತಿಸಿರುವ ಕಾಂಗ್ರೆಸ್ ವಕ್ತಾರ ಅಭಿಶೇಕ್ ಮಾನು ಸಿಂಘ್ವಿ ಅವರು, ಆಕೆ ಪಕ್ಷದಲ್ಲಿ ಪಾತ್ರ ಬಯಸಿದರೆ ಅದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಪ್ರಿಯಾಂಕ ಕಾಂಗ್ರೆಸ್ ಕುಟುಂಬದ ಅವಿಭಾಜ್ಯ ಅಂಗ. ಸಕ್ರೀಯ ರಾಜಕೀಯಕ್ಕಿಳಿಯುವುದು ಅವರ ಹಕ್ಕು ಎಂದು ಅವರು ಅಭಿಪ್ರಾಯಿಸಿದರು.

ಅಮೇಠಿಯಲ್ಲಿ ರಾಹುಲ್ ಪರ ಪ್ರಚಾರ ಮಾಡಿದ ಪ್ರಿಯಾಂಕ, "ನಿಮ್ಮ ಸೇವೆ ಮಾಡುವುದೇ ರಾಹುಲ್ ಧರ್ಮ. ನಿಮಗೆ ಸೇವೆ ಒದಗಿಸುವ ಮೂಲಕ ಆತ ನಮ್ಮ ತಂದೆಯ ಸೇವೆ ಮಾಡುತ್ತಾನೆ" ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
1984ರಿಂದ ಮೂರು ಅವಧಿಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಅಮೇಠಿ ಕ್ಷೇತ್ರದಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. 1999ರಲ್ಲಿ ರಾಜೀವ್ ಪತ್ನಿ ಸೋನಿಯಾ ಈ ಕ್ಷೇತ್ರವನ್ನು ಪ್ರತಿನಿಧಿಸಿ ಬಳಿಕ ತನ್ನ ಪುತ್ರ ರಾಹುಲ್‌ಗೆ ಬಿಟ್ಟುಕೊಟ್ಟಿದ್ದರು. ರಾಹುಲ್ ಇಲ್ಲಿಂದ ದ್ವಿತೀಯ ಬಾರಿಗೆ ಆಯ್ಕೆ ಬಯಸಿದ್ದಾರೆ.

ಮುಲಾಯಂ ಧೋರಣೆಗೆ ಟೀಕೆ
ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಪ್ರಣಾಳಿಕೆಯ ಇಂಗ್ಲೀಷ್ ವಿರೋಧವನ್ನು ಟೀಕಿಸಿದ ಪ್ರಿಯಾಂಕ, ಇದರಿಂದ ಪಕ್ಷವು ಕಾಲದೊಂದಿಗೆ ಹೆಜ್ಜೆ ಹಾಕುತ್ತಿಲ್ಲ ಎಂಬುದು ವೇದ್ಯವಾಗುತ್ತದೆ ಎಂದು ನುಡಿದರು. ಅಲ್ಲದೆ, ಇಂತಹ ಅಭಿಪ್ರಾಯ ಹೊಂದಿರುವವರನ್ನು ಭೇಟಿಯಾಗಲು ತಾನು ಇಚ್ಛಿಸುತ್ತೇನೆ ಎಂದೂ ಅವರು ನುಡಿದರು.


 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಿಂದುತ್ವ ಭಾರತೀಯ ಸಿದ್ಧಾಂತವಲ್ಲ: ಪ್ರಣಬ್
ವರುಣ್ ರಾಷ್ಟ್ರೀಯ ಭೀತಿ: ಯುಪಿ ಸರ್ಕಾರ
ಸೋನಿಯಾ -ಅಡ್ವಾಣಿ ಪರಸ್ಪರ ಟೀಕಾ ಪ್ರಹಾರ
ಪುಲ್ವಾಮದಲ್ಲಿ ಭೀಕರ ಗುಂಡಿನ ಚಕಮಕಿ: ಓರ್ವ ಉಗ್ರ ಬಲಿ
ಸಿಂಗ್ ದುರ್ಬಲ, ಅಧಿಕಾರವಿಲ್ಲ: ಮತ್ತೆ ಚುಚ್ಚಿದ ಆಡ್ವಾಣಿ
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ನಾಯಕ ಲೋನ್ ಸ್ಫರ್ಧೆ