ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್ ಬುಡಿಯಾ ಅಲ್ಲ ಗುಡಿಯಾ: ಮೋದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಬುಡಿಯಾ ಅಲ್ಲ ಗುಡಿಯಾ: ಮೋದಿ
ಕಾಂಗ್ರೆಸ್ ಪಕ್ಷವನ್ನು ಮುದಿಯರ ಪಕ್ಷವೆಂದು ಟೀಕಿಸಿದ್ದ ಭಾರತೀಯ ಜನತಾ ಪಕ್ಷದ ನಾಯಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ್ ಮೋದಿ, ರವಿವಾರದಂದು ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು 125 ವರ್ಷ ವಯಸ್ಸಿನ "ಗುಡಿಯಾ " ಎಂದು ಮೊತ್ತೊಮ್ಮೆ ಚಚ್ಚಿದ್ದಾರೆ.

ಉತ್ತರ ಪ್ರದೇಶದ ಶರವಸ್ತಿ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ ಅಬ್ ಮೈ ಕಾಂಗ್ರೆಸ್‌ ಕೋ ಬುಡಿಯಾ ನಹೀ ಗುಡಿಯಾ ಕಹೂಂಗಾ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ವೃದ್ಧ ಮಹಿಳೆಯರ ಪಕ್ಷವಾಗಿದ್ದರಿಂದ ದೇಶಕ್ಕೆ ಭಾರವಾಗಿದೆ ಎಂದು ಹೋಲಿಸಿದ ಮೋದಿಯವರ ಬುಡಿಯಾ ಹೇಳಿಕೆಯಿಂದಾಗಿ ಕೆರಳಿದ ಕಾಂಗ್ರೆಸ್ ಪಕ್ಷ ಮೋದಿಯವರು ಮಹಿಳೆಯರ ಹಾಗೂ ಹಿರಿಯರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ 37ವರ್ಷ ವಯಸ್ಸಿನ ಪ್ರಿಯಾಂಕಾ ಗಾಂಧಿ ತಾವು ವೃದ್ಧರಂತೆ ಕಾಣುತ್ತೇವೆಯೇ ಎಂದು ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಂದಲ್ಲ ಒಂದಿನ ರಾಹುಲ್ ಪ್ರಧಾನಿಯಾಗ್ತಾರೆ: ಪ್ರಿಯಾಂಕ
ಹಿಂದುತ್ವ ಭಾರತೀಯ ಸಿದ್ಧಾಂತವಲ್ಲ: ಪ್ರಣಬ್
ವರುಣ್ ರಾಷ್ಟ್ರೀಯ ಭೀತಿ: ಯುಪಿ ಸರ್ಕಾರ
ಸೋನಿಯಾ -ಅಡ್ವಾಣಿ ಪರಸ್ಪರ ಟೀಕಾ ಪ್ರಹಾರ
ಪುಲ್ವಾಮದಲ್ಲಿ ಭೀಕರ ಗುಂಡಿನ ಚಕಮಕಿ: ಓರ್ವ ಉಗ್ರ ಬಲಿ
ಸಿಂಗ್ ದುರ್ಬಲ, ಅಧಿಕಾರವಿಲ್ಲ: ಮತ್ತೆ ಚುಚ್ಚಿದ ಆಡ್ವಾಣಿ