ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಹಾಜನ್ ಫಿಕ್ಸರ್, ಡೀಲರ್, ಡಬಲ್ ಡೀಲರ್: ಪ್ರವೀಣ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಾಜನ್ ಫಿಕ್ಸರ್, ಡೀಲರ್, ಡಬಲ್ ಡೀಲರ್: ಪ್ರವೀಣ್
PTI
ಪ್ರಮೋದ್ ಮಹಾಜನ್ ಅವರೊಬ್ಬ ಸಂಚುಗಾರ, ಫಿಕ್ಸರ್, ಡೀಲರ್ ಮತ್ತು ಡಬಲ್ ಡೀಲರ್" ಎಂಬುದಾಗಿ ಅವರ ಸಹೋದರ ಪ್ರವೀಣ್ ಹೇಳಿದ್ದಾರೆ. ಪ್ರಮೋದ್ ಮಹಾಜನ್ ಅವರನ್ನು ಗುಂಡಿಟ್ಟು ಕೊಂದು ಜೀವವಾಧಿ ಶಿಕ್ಷೆಗೀಡಾಗಿರುವ ಪ್ರವೀಣ್ ಮಹಾಜನ್ ಜೈಲಿನಿಂದಲೇ ಪುಸ್ತಕ ಒಂದನ್ನು ಬರೆದಿದ್ದು ಅದರಲ್ಲಿ ತನ್ನ ಸಹೋದರನ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದ್ದಾರೆ. ಪುಸ್ತಕದಲ್ಲಿ ಪ್ರಮೋದ್ ವ್ಯಕ್ತಿತ್ವಕ್ಕೆ ಮಸಿಬಳಿಯುವಂತಹ ಅಂಶಗಳು ಸೇರಿವೆ.

'ಮೈ ಆಲ್ಬಂ' ಎಂಬ ಹೆಸರಿನ 175 ಪುಟಗಳ ಪುಸ್ತಕವನ್ನು ಪ್ರವೀಣ್ ಬರೆದಿದ್ದು, ಇದೂ ಸದ್ಯವೇ ಮರಾಠಿ ಹಾಗೂ ಆಂಗ್ಲ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಪ್ರಮೋದ್ ಅವರ ವೈಯಕ್ತಿಕ ಹಾಗೂ ರಾಜಕೀಯ ಬದುಕು, ಅವರ ತತ್ವ ಸಿದ್ಧಾಂತಗಳು, ರಾಜಕೀಯ ಸಹಚರರು ಇತ್ಯಾದಿಗಳು ಸೇರಿದ್ದು, ಇವುಗಳಲ್ಲಿ ಹೆಚ್ಚಿನವು ಪ್ರಶಂಸಾರ್ಹವಲ್ಲ.

"ಈ ಪುಸ್ತಕವನ್ನು ಒಂದು ಸಾಮಾನ್ಯ ಪುಸ್ತವಾಗಿ ಪರಿಗಣಿಸಬೇಕು. ಇದರಲ್ಲಿ ನ್ಯಾಯಾಲಯವುವ ಗೌಪ್ಯವಾಗಿ ನಡೆಸಿರುವ ವಿಚಾರಣೆಯ ಯಾವುದೇ ವಿಚಾರಗಳು ಸೇರಿಲ್ಲ" ಎಂಬುದಾಗಿ ಅವರ ಪತ್ನಿ ಸಾರಂಗಿ ಸ್ಪಷ್ಟಪಡಿಸಿದ್ದಾರೆ. ಇದು ತನ್ನ ಪತಿಯ ಆತ್ಮಚರಿತ್ರೆಯಲ್ಲ ಎಂದು ಹೇಳಿರುವ ಅವರು ಇದು ತನ್ನ ಅವರ ಬದುಕಿನಲ್ಲಿ ನಡೆದ ನೈಜ ಘಟನೆಗಳು ಅನುಭವಗಳ ಕಂತೆ ಎಂದು ತಿಳಿಸಿದ್ದಾರೆ.

ತನ್ನ ಇಚ್ಚೆಗೆ ತಕ್ಕಂತೆ ಎಲ್ಲರನ್ನೂ ಒಗ್ಗಿಸಿಕೊಳ್ಳಲು ಪ್ರಮೋದ್ ಅವರನ್ನು ಖರೀದಿಸುತ್ತಿದ್ದರು ಅಥವಾ ಅವರನ್ನು ಬೆದರಿಸುತ್ತಿದ್ದರು ಎಂಬುದಾಗಿ ತನ್ನ ಅಣ್ಣನನ್ನು ಹತ್ತಿರದಿಂದ ಬಲ್ಲವರಾಗಿದ್ದ ಪ್ರವೀಣ್ ಹೇಳಿದ್ದಾರೆ.

ಅದೊಮ್ಮೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಮೋದ್ ಅವರನ್ನು ಅತಿದೊಡ್ಡ ಸಮಸ್ಯೆಯಿಂದ ಹೇಗೆ ಪಾರುಮಾಡಿದ್ದರು ಎಂಬದನ್ನು ಆಲ್ಬಂನಲ್ಲಿ ನಮೂದಿಸಿದ್ದಾರೆ. 1998ರಲ್ಲಿ ಪ್ರಮೋದದ್ ಅವರು ರಾಜ್ಯಸಭಾ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸುವ ವೇಳೆ ಅವರು ತಮ್ಮ ವೃತ್ತಿಯನ್ನು ಪ್ರಧಾನಿಯವರಿಗೆ ಸಲಹೆಗಾರ ಎಂದು ನಮೂದಿಸಿದ್ದರು. ಆದರೆ ಇದು ಲಾಭದಾಯಕ ಹುದ್ದೆ.

ಇದನ್ನು ಪವಾರ್ ಅವರು ಪ್ರಮೋದ್ ಗಮನಕ್ಕೆ ತಂದಿದ್ದರು. ಬಳಿಕ ತನ್ನ ಸ್ಥಾನಕ್ಕೆ ಹಿಂದಿನ ದಿನಾಂಕದಂದು ರಾಜೀನಾಮೆ ಕೊಟ್ಟಂತೆ ಪತ್ರ ನೀಡಿದ ಪ್ರಮೋದ್ ಈ ಲೋಪವನ್ನು ತಿದ್ದಿದ್ದರು. ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಪ್ರಮೋದ್ ನಾಮಪತ್ರ ತಿರಸ್ಕೃತಗೊಂಡರೆ, ಪವಾರ್ ಅವರ ಕಡುವಿರೋಧಿ ಸರೇಶ್ ಕಲ್ಮಾಡಿ ಅವರು ಆಯ್ಕೆಯಾಗುತ್ತಿದ್ದರು. ಇದನ್ನು ತಪ್ಪಿಸಲು ಹೀಗೆ ಮಾಡಲಾಗಿತ್ತು ಎಂಬುದಾಗಿ ಪ್ರವೀಣ್ ಪುಸ್ತಕದಲ್ಲಿ ಬರೆದಿದ್ದಾರೆ.

ಪ್ರಮೋದ್ ಅವರ ಸ್ವಭಾವದಿಂದಾಗಿ ಅವರ ಪತ್ನಿ ರೇಖಾ ಮಹಾಜನ್ ಹಾಗೂ ಮಕ್ಕಳು ಸೇರಿದಂತೆ ಎಲ್ಲರೂ ತೊಂದರೆ ಅನುಭವಿಸಿದ್ದಾರೆ ಎಂಬುದಾಗಿ ಹೇಳಿರುವ ಪ್ರವೀಣ್ ಪುಸ್ತಕದಲ್ಲಿ ಕೆಲವು ಘಟನೆಗಳನ್ನು ಮಂಡಿಸಿದ್ದಾರೆ. ಅವುಗಳು ಇಂತಿವೆ.

"ಪ್ರಮೋದ್ ಅದೊಂದು ಸಾರಿ ಅಮ್ಮನ ಮೇಲೆ ಕೈ ಎತ್ತಿರಲಿಲ್ಲವೇ? ಇದು ಭಾವ(ಸಹೋದರಿಯ ಪತಿ) ಗೋಪಿನಾಥ್ ಮುಂದೆ ಅವರಿಗೆ ತಿಳಿದಿರಲಿಲ್ಲವೇ?"

"ತನ್ನ ಪತ್ನಿಯ ಸಡಿಲ ನಡತೆಯ ಕುರಿತು ಪ್ರಮೋದ್ ಪುತ್ರ ರಾಹುಲ್ ಮಹಾಜನ್ ನನ್ನೊಂದಿಗೆ ದೂರಿಕೊಂಡಿರಲಿಲ್ಲವೇ?"

"ತನ್ನ ತಂದೆ ಫ್ರೆಂಡ್ ಜತೆ ಯುರೋಪ್‌ಗೆ 1992ರಲ್ಲಿ ಹೇಗೆ ತೆರಳಿದರು ಎಂಬ ಸಂಗತಿಯನ್ನು ಪೂನಂ(ಪ್ರಮೋದ್ ಪುತ್ರಿ) ತಿಳಿಸಿದಾಗ ನನ್ನ ಕಣ್ಣಲ್ಲಿ ನೀರು ಜಿನುಗಿರಲಿಲ್ಲವೇ? ಇದಕ್ಕೆ ಇನ್ನೋರ್ವ ಸಹೋದರ ಪ್ರಕಾಶ್ ಮಹಾಜನ್ ಹಾಗೂ ಸಹೋದರಿ ಪ್ರತಿಮಾ ಮಹಾಜನ್ ಏನು ಹೇಳುತ್ತಾರೆ?"

ಅವರು ಆಡ್ವಾಣಿ ಸೇರಿದಂತೆ ಇತರ ಹಿರಿಯ ನಾಯಕರಿಗೆ ತೋರುತ್ತಿದ್ದ ಗೌರವ ಬರಿಯ ನಾಟಕ ಎಂದು ಹೇಳಿದ್ದಾರೆ.
2006ರ ಎಪ್ರಿಲ್ 22ರಂದು ಮುಂಬೈ ವರ್ಲಿಯಲ್ಲಿರುವ ಪ್ರಮೋದ್ ಮಹಾಜನ್ ಅವರ ಮನೆಗೆ ತೆರಳಿದ್ದ ಪ್ರವೀಣ್ ಪಿಸ್ತೂಲಿನಿಂದ ತನ್ನಣ್ಣನಿಗೆ ಗುಂಡೆಸೆದಿದ್ದರು. ಬಳಿಕ ಸಾವುಬದುಕಿನ ಹೋರಾಟದ ಬಳಿಕ ಅವರು ಮೇ 3ರಂದು ಸಾವನ್ನಪ್ಪಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಬುಡಿಯಾ ಅಲ್ಲ ಗುಡಿಯಾ: ಮೋದಿ
ಒಂದಲ್ಲ ಒಂದಿನ ರಾಹುಲ್ ಪ್ರಧಾನಿಯಾಗ್ತಾರೆ: ಪ್ರಿಯಾಂಕ
ಹಿಂದುತ್ವ ಭಾರತೀಯ ಸಿದ್ಧಾಂತವಲ್ಲ: ಪ್ರಣಬ್
ವರುಣ್ ರಾಷ್ಟ್ರೀಯ ಭೀತಿ: ಯುಪಿ ಸರ್ಕಾರ
ಸೋನಿಯಾ -ಅಡ್ವಾಣಿ ಪರಸ್ಪರ ಟೀಕಾ ಪ್ರಹಾರ
ಪುಲ್ವಾಮದಲ್ಲಿ ಭೀಕರ ಗುಂಡಿನ ಚಕಮಕಿ: ಓರ್ವ ಉಗ್ರ ಬಲಿ