ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಲ್ಕೋ ಗಣಿಗೆ ನಕ್ಸಲರ ದಾಳಿ: 7 ಜವಾನರು ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಲ್ಕೋ ಗಣಿಗೆ ನಕ್ಸಲರ ದಾಳಿ: 7 ಜವಾನರು ಬಲಿ
ಒರಿಸ್ಸಾದ ಕೋರಪುಟ್ ಜಿಲ್ಲೆಯಲ್ಲಿರುವ ಸಾರ್ವಜನಿಕ ವಲಯದ ನಲ್ಕೋ ಸಂಸ್ಥೆಯ ಬಾಕ್ಸೈಟ್ ಗಣಿಗೆ ದಾಳಿ ನಡೆಸಿರುವ ನಕ್ಸಲರು ಏಳು ಸಿಐಎಸ್ಎಫ್ ಸಿಬ್ಬಂದಿಗಳನ್ನು ಕೊಂದು ಹಾಕಿದ್ದಾರೆ. ಏಶ್ಯಾದ ಅತಿದೊಡ್ಡ ಬಾಕ್ಸೈಟ್ ಗಣಿಗಳ ಸಾಲಿಗೆ ಸೇರುವ ಕಟ್ಟೆಚ್ಚರದ ಭದ್ರತೆಯಿರುವ ಈ ಗಣಿಗೆ ದಾಳಿ ನಡೆಸಿದ ವೇಳೆ ನಡೆದಿರುವ ಗುಂಡಿನ ಕಾಳಗದಲ್ಲಿ ನಾಲ್ವರು ಮಾವೋವಾದಿಗಳೂ ಹತರಾಗಿದ್ದಾರೆ.

"ಏಳು ಸಿಐಎಸ್ಎಫ್ ಜವಾರು ಹಾಗೂ ನಾಲ್ವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ಹೇಳಿದ್ದಾರೆ.

ಗಣಿಯ ಸಮೀಪವಿದ್ದ ಸಿಐಎಸ್ಎಫ್ ಶಸ್ತ್ರಾಗಾರದಿಂದ ಶಸ್ತ್ರಾಸ್ತ್ರಗಳನ್ನು ಲೂಟಿಮಾಡಿದ್ದಾರೆ ಎಂದು ಭಯಪಡಲಾಗಿದೆ. ನಕ್ಸಲರು ಈ ಹೇಯ ದಾಳಿಯನ್ನು ಭಾನುವಾರ ರಾತ್ರಿ ನಡೆಸಿದ್ದಾರೆ. ಇಲ್ಲಿಂದ 370 ಕಿಲೋಮೀಟರ್ ದೂರದ ಪಂಚ್ಪಾಟ್ಮಲಿ ಎಂಬಲ್ಲಿರುವ ಸರ್ಕಾರಿ ಸ್ವಾಮ್ಯದ ನ್ಯಾಶನಲ್ ಅಲ್ಯುಮಿನಿಯಂ ಕಂಪೆನಿ ಲಿಮಿಟೆಡ್(ನಲ್ಕೋ)ನ ಬಾಕ್ಸೈಟ್ ಗಣಿಗೆ ಸುಮಾರು ನೂರಕ್ಕೂ ಹೆಚ್ಚು ನಕ್ಸರು ಮುತ್ತಿಗೆ ಹಾಕಿದ ವೇಳೆ ಭಾರೀ ಗುಂಡಿನ ಕಾಳಗ ಸಂಭವಿಸಿದೆ ಎಂಬುದಾಗಿ ಡಿಐಜಿ (ಆಗ್ನೇಯ ವಲಯದ) ಸಂಜೀವ್ ಪಾಂಡಾ ನುಡಿದರು. ಅವರು ಇಲ್ಲಿಗೆ ಸಮೀಪವಿರುವ ಸಿಐಎಸ್ಎಫ್ ಶಿಬಿರಕ್ಕೂ ದಾಳಿ ನಡೆಸಿದ್ದಾರೆ.

ರಾತ್ರಿ ಸುಮಾರು ಒಂಬತ್ತು ಗಂಟೆಗೆ ನಕ್ಸಲರು ದಾಳಿ ನಡೆಸಿದರು ಈ ವೇಳೆ 12 ಸಿಐಎಸ್ಎಫ್ ಸಿಬ್ಬಂದಿಗಳು ಗಣಿ ಪ್ರದೇಶದಲ್ಲಿರುವ ಕ್ಯಾಂಟೀನ್‌ನಲ್ಲಿದ್ದರು. ಬಂಡುಕೋರರು ಗಣಿಗೆ ಸಾಗುವ ರಸ್ತೆಯನ್ನೂ ಅಡ್ಡಿಪಡಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಡ್ವಾಣಿ, ಅಟಲ್‌ರನ್ನು ಸಮುದ್ರಕ್ಕೆ ಎಸೆಯಿರಿ: ಹರಿಪ್ರಸಾದ್
ನ್ಯಾಯಾಲಯದಲ್ಲೂ ಹೈ ಟೆಕ್ ತಂತ್ರಜ್ಞಾನ
ಮಹಾಜನ್ ಫಿಕ್ಸರ್, ಡೀಲರ್, ಡಬಲ್ ಡೀಲರ್: ಪ್ರವೀಣ್
ಕಾಂಗ್ರೆಸ್ ಬುಡಿಯಾ ಅಲ್ಲ ಗುಡಿಯಾ: ಮೋದಿ
ಒಂದಲ್ಲ ಒಂದಿನ ರಾಹುಲ್ ಪ್ರಧಾನಿಯಾಗ್ತಾರೆ: ಪ್ರಿಯಾಂಕ
ಹಿಂದುತ್ವ ಭಾರತೀಯ ಸಿದ್ಧಾಂತವಲ್ಲ: ಪ್ರಣಬ್