ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಂತರಿಕ ಭದ್ರತೆ ಹೇಳಿಕೆಗೆ ಸೋನಿಯಾ ಕ್ಷಮೆಯಾಚಿಸಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಂತರಿಕ ಭದ್ರತೆ ಹೇಳಿಕೆಗೆ ಸೋನಿಯಾ ಕ್ಷಮೆಯಾಚಿಸಲಿ
"ವಿದೇಶಿ ಉಗ್ರರಿಗಿಂತ ದೇಶದಲ್ಲಿರುವ ಜನತೆಯಿಂದ ರಾಷ್ಟ್ರವು ಅಪಾಯವನ್ನು ಎದುರಿಸುತ್ತಿದೆ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪಕ್ಷವನ್ನು ದೃಷ್ಟಿಯಲ್ಲಿರಿಸಿ ಹೇಳಿರುವುದಕ್ಕೆ ಅವರು ಕ್ಷಮೆ ಯಾಚಿಸಬೇಕು" ಎಂದು ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಒತ್ತಾಯಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಡಿರುವ ಭಾಷಣದಲ್ಲಿ ಸೋನಿಯಾ ಗಾಂಧಿ "ರಾಷ್ಟ್ರವನ್ನು ಪ್ರವೇಶಿಸುತ್ತಿರುವ ವಿದೇಶಿ ಉಗ್ರರಿಗಿಂತ ನಾವು ದೇಶದೊಳಗಿನ ಜನರಿಂದ ಹೆಚ್ಚಿನ ಅಪಾಯ ಎದುರಿಸುತ್ತಿದ್ದೇವೆ" ಎಂಬ ಹೇಳಿಕೆಯು ಆಘಾತಕಾರಿಯಾಗಿದೆ ಎಂದು ಆಡ್ವಾಣಿ ಹೇಳಿದ್ದಾರೆ.

"ಸೋನಿಯಾ ಗಾಂಧಿ ನೇರವಾಗಿ ನಮ್ಮ ಪಕ್ಷವನ್ನು ಹೆಸರಿಸದಿದ್ದರೂ, ಇದು ನಮ್ಮ ಪಕ್ಷವನ್ನುದ್ದೇಶಿಸಿ ಮಾಡಿರುವ ಆರೋಪವೆಂಬುದು ಸ್ಪಷ್ಟ" ಎಂದು ಅವರು ನುಡಿದರು.

ಭಾರತವು ಐತಿಹಾಸಿಕ ಸಂಪ್ರದಾಯವನ್ನು ಹೊಂದಿದೆ. 1962 ಹಾಗೂ 1965ರಲ್ಲಿ ಯುದ್ಧಗಳು ಸಂಭವಿಸಿದಾಗಲೂ, ಆಗಿನ ಪ್ರಧಾನಿಗಳಾಗಿದ್ದ, ಜವಾಹರ್ ಲಾಲ್ ನೆಹರೂ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರುಗಳು ಜನಸಂಘ ಹಾಗೂ ಆರೆಸ್ಸೆಸ್ ಪಾತ್ರವನ್ನು ಪ್ರಶಂಸಿದ್ದರು ಎಂದು ನುಡಿದರು. ಅಪರೂಪ ಎಂಬಂತೆ ನಹೆರು ಅವರು 1963ರ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಲು ಆರೆಸ್ಸೆಸ್ ತುಕಡಿ ಕಳುಹಿಸುವಂತೆ ಕೋರಿದ್ದರು ಎಂಬುದನ್ನು ಆಡ್ವಾಣಿ ನೆನಪಿಸಿಕೊಂಡರು.

"ಸೋನಿಯಾರಿಗೆ ಅವರದ್ದೇ ಪಕ್ಷದ ಇತಿಹಾಸ ತಿಳಿದಿಲ್ಲ. ಅವರು ಇಂತಹ ಹೇಳಿಕೆಗಳನ್ನು ಮಾಡುತ್ತಿದ್ದಾರೆ. ಇದು ಅಪನಿಂದನೆಯಾಗಿದ್ದು, ತನ್ನ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಇಲ್ಲವೇ, ಅಲ್-ಖೈದಾದಂತಹ ಮೂಲಭೂತವಾದಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಪ್ರಧಾನಿ ಪಟ್ಟದ ಆಕಾಂಕ್ಷಿ ಆಡ್ವಾಣಿ ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಯೋಧ್ಯೆಯಲ್ಲಿ ಇದ್ದದ್ದು ರಾಮ ಮಂದಿರ: ಆಜಾದ್!
ನಲ್ಕೋ ಗಣಿಗೆ ನಕ್ಸಲರ ದಾಳಿ: 7 ಜವಾನರು ಬಲಿ
ಅಡ್ವಾಣಿ, ಅಟಲ್‌ರನ್ನು ಸಮುದ್ರಕ್ಕೆ ಎಸೆಯಿರಿ: ಹರಿಪ್ರಸಾದ್
ನ್ಯಾಯಾಲಯದಲ್ಲೂ ಹೈ ಟೆಕ್ ತಂತ್ರಜ್ಞಾನ
ಮಹಾಜನ್ ಫಿಕ್ಸರ್, ಡೀಲರ್, ಡಬಲ್ ಡೀಲರ್: ಪ್ರವೀಣ್
ಕಾಂಗ್ರೆಸ್ ಬುಡಿಯಾ ಅಲ್ಲ ಗುಡಿಯಾ: ಮೋದಿ