ಚುನಾವಣೋತ್ತರ ಮೈತ್ರಿಯ ಕುರಿತು ಬಿಜೆಪಿಯು ತಮ್ಮ ಪಕ್ಷವನ್ನು ಹಿಂಬಾಗಿಲ ಮೂಲಕ ಸಂಪರ್ಕಿಸಿದೆ ಎಂಬ ವರದಿಗಳನ್ನು ಆಧಾರ ರಹಿತ ಎಂಬುದಾಗಿ ಎಐಎಡಿಎಂಕೆ ನಾಯಕಿ ಜಯಲಲಿತಾ ತಳ್ಳಿಹಾಕಿದ್ದಾರೆ." ಇಂತಹ ವರದಿಗಳು ಆಧಾರರಹಿತವಾದದ್ದು ಎಂಬುದನ್ನು ಸ್ಪಷ್ಟಪಡಿಸಲು ತಾನು ಇಚ್ಚಿಸುತ್ತೇನೆ ಮತ್ತು ಎಐಎಡಿಎಂಕೆಯು ಚುನಾವಣೋತ್ತರ ಮೈತ್ರಿಗಾಗಿ ಯಾವುದೇ ಪಕ್ಷದೊಂದಿಗೂ ಮಾತುಕತೆ ನಡೆಸುತ್ತಿಲ್ಲ" ಎಂದು 'ಅಮ್ಮ' ಹೇಳಿದ್ದಾರೆ.ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಅವರು ಎಐಎಡಿಎಂಕೆಯೊಂದಿಗೆ ಚುನಾವಣೋತ್ತರ ಮೈತ್ರಿಗಾಗಿ ಮಾತುಕತೆ ನಡೆಯುತ್ತಿದೆ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ಹೇಳಿದ್ದರು.ಮಾಯಾವತಿ ಅಥವಾ ಜಯಲಲಿತಾ ರೊಂದಿಗೆ ಚುನಾವಣೋತ್ತರ ಮೈತ್ರಿಗೆ ಮುಕ್ತರಾಗಿದ್ದೀರಾ ಎಂಬುದಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಆಡ್ವಾಣಿ, 'ಹೌದು ಜಯಲಲಿತಾರೊಂದಿಗೆ....' ಎಂದು ಉತ್ತರಿಸಿದ್ದರು. |