ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಮೀಕ್ಷೆ: ಯುಪಿಎ-ಎನ್‌ಡಿಎ ಕತ್ತುಕತ್ತಿನ ಹೋರಾಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಮೀಕ್ಷೆ: ಯುಪಿಎ-ಎನ್‌ಡಿಎ ಕತ್ತುಕತ್ತಿನ ಹೋರಾಟ
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಮತ್ತೊಂದು ಸಮೀಕ್ಷೆ ಹೊರಬಿದ್ದಿದ್ದು, ಅದರ ಪ್ರಕಾರ 2004ರಂತೆಯೇ ಕಾಂಗ್ರೆಸ್ ಪಕ್ಷವು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಮತ್ತು ಅದರ ನೇತೃತ್ವದ ಯುಪಿಎ ಮೈತ್ರಿಕೂಟವು ಬೇರೆ ಕೂಟಗಳಿಗಿಂತ ಮೇಲುಗೈ ಸಾಧಿಸಲಿದೆ. ಆದರೆ ಅತಂತ್ರ ಸಂಸತ್ತು ಸೃಷ್ಟಿಯಾಗುವುದು ಖಚಿತ ಎನ್ನುತ್ತದೆ ಸಮೀಕ್ಷೆ.

ದಿ ವೀಕ್ ಮತ್ತು ಸಿ ಓಟರ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಪಿಎ 234 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಆದರೆ ಇದರಲ್ಲಿ ಈಗ ಯುಪಿಎಯಿಂದ ದೂರವಾಗಿರುವ ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷ, ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಮತ್ತು ರಾಮ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿಗಳನ್ನೂ ಸೇರಿಸಲಾಗಿದೆ. ಸದ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಈ ಪಕ್ಷಗಳೊಂದಿಗೆ ಯಾವುದೇ ಸ್ಥಾನ ಹೊಂದಾಣಿಕೆಯಲ್ಲಿಲ್ಲ. ಪ್ರಸ್ತುತ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವು 145 ಸ್ಥಾನಗಳನ್ನು ಹೊಂದಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟವು 186 ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳುವುದು ಎಂದು ಸಮೀಕ್ಷೆ ಹೇಳುತ್ತಿದ್ದು, ಬಿಜೆಪಿಯು 140 ಸ್ಥಾನಗಳನ್ನು ಗೆದ್ದುಕೊಳ್ಳಲಿರುವುದಾಗಿ ಅಂದಾಜಿಸಲಾಗಿದೆ. ಅಂದರೆ ಕಳೆದ ಬಾರಿಗಿಂತ 2 ಸ್ಥಾನ ಕಡಿಮೆ.

ಬಹುಮತ ಲಭಿಸಬೇಕಾದರೆ 272 ಸ್ಥಾನಗಳು ಅಗತ್ಯವಿದೆ.

ಈ ಸಮೀಕ್ಷೆ ಆಡಳಿತ ವಿರೋಧಿ ಅಲೆಯ ಸಾಧ್ಯತೆಯನ್ನು ಹೇಳುತ್ತಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷವು ತನ್ನ 2004ರ ಸ್ಥಾನಗಳನ್ನೇ ಉಳಿಸಿಕೊಳ್ಳಲಿದೆ. ಅದು ಕೆಲವು ರಾಜ್ಯಗಳಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಲಿದೆಯಾದರೂ, ಕೇರಳದಂತಹ ಬೇರೆ ರಾಜ್ಯಗಳಲ್ಲಿ ಲಾಭ ಪಡೆಯಲಿದೆ. ಯುಪಿಎಗೆ ಶೇ.35 ಮತಗಳು ದೊರೆಯಲಿವೆ ಎಂದು ಅಂದಾಜಿಸಲಾಗಿದೆ.

ಸಮಾಜವಾದಿ ಪಕ್ಷವು 32 ಸ್ಥಾನಗಳನ್ನೂ, ಆರ್‌ಜೆಡಿ ಮತ್ತು ಎಲ್‌ಜೆಪಿಗಳು ಜಂಟಿಯಾಗಿ 15 ಸ್ಥಾನಗಳನ್ನೂ ಗಳಿಸಲಿವೆ ಎಂದು ಸಮೀಕ್ಷೆ ಅಂದಾಜಿಸಿದೆ. ಕಾಂಗ್ರೆಸಿನ ಮಿತ್ರರಾಗಿರುವ ಎನ್‌ಸಿಪಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಅನುಕ್ರಮವಾಗಿ 13 ಹಾಗೂ 11 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಲಿವೆ. ಅಂತೆಯೇ ಡಿಎಂಕೆ ಮತ್ತದರ ಮಿತ್ರಕೂಟವು 13 ಸ್ಥಾನಗಳನ್ನು ಜಯಿಸುವ ಸಾಧ್ಯತೆಗಳಿವೆ.

ಬಿಜೆಪಿ ಮಿತ್ರರಲ್ಲಿ, ಜೆಡಿಯು ಮತ್ತು ಶಿವಸೇನೆಯು ಅನುಕ್ರಮವಾಗಿ 18 ಹಾಗೂ 12 ಸ್ಥಾನಗಳನ್ನು ಗೆದ್ದುಕೊಳ್ಳುವ ನಿರೀಕ್ಷೆ ಇದೆ.

ಯುಪಿಎಗೆ ಹೋಲಿಸಿದರೆ ಎನ್‌ಡಿಎ ಅತಿದೊಡ್ಡ ಚುನಾವಣಾಪೂರ್ವ ಮೈತ್ರಿಕೂಟವಾಗಿದ್ದು, ಬಿಜೆಪಿಯ ಭದ್ರಕೋಟೆಗಳಲ್ಲಿ ಅದರ ವೋಟ್ ಬ್ಯಾಂಕ್‌ಗೆ ಯಾವುದೇ ಹಾನಿಯಾಗುವ ಸಾಧ್ಯತೆಗಳಿಲ್ಲ. ಅದಕ್ಕೆ ಶೇ.31 ಮತಗಳು ದೊರೆಯುವ ನಿರೀಕ್ಷೆ ಇದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್‌ಗೆ ಸೇನೆ ಕಳುಹಿಸಿ ಉಗ್ರರನ್ನು ಪುಡಿಗೈಯುತ್ತೇವೆ: ರಾಜ್‌ನಾಥ್
ಬಿಜೆಪಿಯೊಂದಿಗೆ ಹೊಂದಾಣಿಕೆ ಮಾತುಕತೆಯಿಲ್ಲ: ಜಯಾ
ಆಡ್ವಾಣಿ ಸಬಲರೆಂಬುದಕ್ಕೆ ಏನಿದೆ ರುಜುವಾತು?
ಕಾಂಧಾರ್ ವೇಳೆ 'ಕರಗಿದ ಕಬ್ಬಿಣ': ಸಿಂಗ್ ಟೀಕೆ
ವರುಣ್ ಪ್ರಕರಣ ಎಪ್ರಿಲ್ 16ಕ್ಕೆ ಮುಂದೂಡಿಕೆ
ಆಂತರಿಕ ಭದ್ರತೆ ಹೇಳಿಕೆಗೆ ಸೋನಿಯಾ ಕ್ಷಮೆಯಾಚಿಸಲಿ