ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮೊದಲ ಹಂತದ ಪ್ರಚಾರಕ್ಕೆ ಇಂದು ಕೊನೆಯ ದಿನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊದಲ ಹಂತದ ಪ್ರಚಾರಕ್ಕೆ ಇಂದು ಕೊನೆಯ ದಿನ
ಏಪ್ರಿಲ್ 16ರಂದು ನಡೆಯುವ ಮೊದಲ ಹಂತದ ಚುನಾವಣೆ ಪ್ರಚಾರಕ್ಕೆ ಇಂದೇ ಕಡೆಯದಿನವಾಗಿದ್ದು, ಎಲ್ಲ ಪಕ್ಷಗಳೂ ಮತಯಾಚನೆಯ ಕೊನೆಯ ಪ್ರಯತ್ನ ನಡೆಸಿವೆ. ಮಧ್ಯಪ್ರದೇಶದಲ್ಲಿ ಸೋನಿಯಾ ಗಾಂಧಿ, ಜಮ್ಮು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ರಾಹುಲ್ ಗಾಂಧಿ ರ‌್ಯಾಲಿಯನ್ನು ಆಯೋಜಿಸಿದ್ದಾರೆ.

ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ, ಜೈಪುರದಲ್ಲಿ ಮಾಯಾವತಿ, ಮತ್ತು ಉತ್ತರ ಮತ್ತು ಮಧ್ಯಗುಜರಾತ್‌ನಲ್ಲಿ ನರೇಂದ್ರ ಮೋದಿ ತಮ್ಮ ಪಕ್ಷಗಳ ಸಾಧನೆಗಳನ್ನು ಜನತೆಯ ಮುಂದಿಟ್ಟು ಮತಯಾಚನೆ ಮಾಡಲಿದ್ದಾರೆ.ರಾಹುಲ್ ರ‌್ಯಾಲಿಯು ತಲ್ವಾಂಡಿ ಸಬೊನಲ್ಲಿ ನಡೆಯಲಿದ್ದು, ಕ್ಯಾ. ಅಮರೀಂದರ್ ಸಿಂಗ್ ಪುತ್ರ ರಾಣಿಂದರ್ ಸಿಂಗ್ ಬಡಾಲ್ ಕುಟುಂಬದಿಂದ ಕಠಿಣ ಹೋರಾಟ ಎದುರಿಸುತ್ತಿದ್ದಾರೆ.

ಮೊದಲ ಹಂತದಲ್ಲಿ 17 ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಸಂಸತ್ತಿನ 543 ಸ್ಥಾನಗಳ ಪೈಕಿ 124 ಸ್ಥಾನಗಳ ಹಣೆಬರಹ ಮತಯಂತ್ರದಲ್ಲಿ ಭದ್ರವಾಗಿ ಉಳಿಯಲಿದೆ. ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೊರಾಂ, ನಾಗಾಲ್ಯಾಂಡ್, ಒರಿಸ್ಸಾದ ಕೆಲವು ಸ್ಥಾನಗಳು, ಜಮ್ಮುಕಾಶ್ಮೀರ, ಉತ್ತರಪ್ರದೇಶದ 16 ಸ್ಥಾನಗಳು, ಬಿಹಾರದ 13, ಜಾರ್ಖಂಡ್‌ನ 6, ಮಹಾರಾಷ್ಟ್ರದ 13 ಸ್ಥಾನಗಳಿಗೆ ಮತ್ತು ಪಶ್ಚಿಮದಲ್ಲಿ ಚತ್ತೀಸ್‌ಗಢ ಮತ್ತು ದಕ್ಷಿಣದಲ್ಲಿ ಆಂಧ್ರಪ್ರದೇಶ, ಕೇರಳ ಅಂಡಮಾನ್, ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಚುನಾವಣೆ ನಡೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಗುಂಡಿಗೆ ಬಲಿ
ಸಚಿವರತ್ತ ಕ್ಷಿಪಣಿ
ಸಮೀಕ್ಷೆ: ಯುಪಿಎ-ಎನ್‌ಡಿಎ ಕತ್ತುಕತ್ತಿನ ಹೋರಾಟ
ಪಾಕ್‌ಗೆ ಸೇನೆ ಕಳುಹಿಸಿ ಉಗ್ರರನ್ನು ಪುಡಿಗೈಯುತ್ತೇವೆ: ರಾಜ್‌ನಾಥ್
ಬಿಜೆಪಿಯೊಂದಿಗೆ ಹೊಂದಾಣಿಕೆ ಮಾತುಕತೆಯಿಲ್ಲ: ಜಯಾ
ಆಡ್ವಾಣಿ ಸಬಲರೆಂಬುದಕ್ಕೆ ಏನಿದೆ ರುಜುವಾತು?