ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೇಶಕ್ಕೆ ಅಡ್ವಾಣಿಯಂತಹ ನಾಯಕರು ಅಗತ್ಯ: ಅಟಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶಕ್ಕೆ ಅಡ್ವಾಣಿಯಂತಹ ನಾಯಕರು ಅಗತ್ಯ: ಅಟಲ್
PTI
ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿರುವ ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂದು ಜನತೆಗೆ ಮನವಿ ಮಾಡಿದ್ದಾರೆ.

ದೇಶ ಇಂದು ಕವಲು ದಾರಿಯಲ್ಲಿ ನಿಂತಿದೆ. ನವದೆಹಲಿಯಲ್ಲಿ ಅವರು ಮಾಧ್ಯಮಗಳಿಗೆ ತಮ್ಮ ಭಾಷಣದ ಪ್ರತಿಯನ್ನು ಬಿಡುಗಡೆ ಮಾಡಿದ್ದು, ಕಳೆದೈದು ವರ್ಷಗಳಲ್ಲಿ ದೇಶದ ಅಭಿವೃದ್ಧಿ ಹಾಗೂ ಭದ್ರತೆಯನ್ನು ಯುಪಿಎ ಸರ್ಕಾರ ಮೂಲೆಗುಂಪು ಮಾಡಿದೆ. ಬಲಿಷ್ಠ ಭಾರತ ಕಟ್ಟುವ ನಿಟ್ಟಿನಲ್ಲಿ ಅಡ್ವಾಣಿಯಂಥ ನಾಯಕರ ಅಗತ್ಯ ರಾಷ್ಟ್ರಕ್ಕಿದೆ ಎಂದು ಹೇಳಿದ್ದಾರೆ.

ರಾಷ್ಟ್ರವಿಂದು ಮೂರು ಕವಲು ದಾರಿಯಲ್ಲಿ ನಿಂತಿದೆ ಎಂದು ವಿಶ್ಲೇಷಿಸಿರುವ ಅವರು ಒಂದು ರಸ್ತೆ ಕಳೆದ ಐದು ವರ್ಷಗಲಲ್ಲಿ ದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ ಯುಪಿಎಯತ್ತ, ಇನ್ನೊಂದು ರಸ್ತೆ ಯಾವುದಾದರೂ ರೀತಿಯಿಂದ ಅಧಿಕಾರ ಹಿಡಿಯಲು ಹೊರಟಿರುವ ಪಕ್ಷಗಳ ಒಕ್ಕೂಟದತ್ತ ಹಾಗೂ ಇನ್ನೊಂದು ರಸ್ತೆ ರಾಜಕೀಯ ಸ್ಥಿರತೆ, ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಭದ್ರತೆ ಒದಗಿಸುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದತ್ತೆ ಹೋಗುತ್ತದೆ. ತನ್ನ ಆರು ವರ್ಷಗಳ ಅವಧಿಯಲ್ಲಿ ಈ ಅಂಶವನ್ನು ಎನ್‌ಡಿಎ ಸಾಬೀತುಪಡಿಸಿದೆ ಎಂದು ವಾಜಪೇಯಿ ಹೇಳಿದ್ದಾರೆ.

ಭಾರತೀಯ ರಾಜಕೀಯದಲ್ಲಿ ಆಡ್ವಾಣಿಯವರಿಗೆ ವಿಶಿಷ್ಟ ಸ್ಥಾನವಿದೆ ಎಂದು ನುಡಿದ ಅಟಲ್, ತಾನು ಮತ್ತು ಅವರು 1952ರಿಂದ ಜತೆಯಾಗಿ ಕೆಲಸ ಮಾಡುತ್ತಿದ್ದೇವೆ, ಅವರ ಬುದ್ಧಿ ಮತ್ತೆ, ಸ್ಪಷ್ಟವಿಚಾರ ಹಾಗೂ ಎಲ್ಲರನ್ನೂ ಸಂಘಟಿತರಾಗಿಸಿ ಜತೆಯಲ್ಲಿ ಕರೆದೊಯ್ಯುವ ಸಾಮರ್ಥ್ಯದಿಂದ ತಾನು ಪ್ರಭಾವಿತನಾಗಿದ್ದೇನೆ ಎಂದು ಹಾಡಿಹೊಗಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಟಲ್, ಅಡ್ವಾಣಿ, Atal, advani
ಮತ್ತಷ್ಟು
ಪಾಕಿಸ್ತಾನದ ವಕೀಲರು ಬೇಕು: ಕಸಬ್
ಮಣಿರತ್ನಂ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಇಂಡೋ-ಪಾಕ್ ಪತ್ರಕರ್ತರ ಸಭೆಗೆ ರಾಮಸೇನೆ ಅಡ್ಡಿ
ಕಸಬ್ ತಾಯಿ ಭೇಟಿ ಕುರಿತು ಅಧಿಕೃತ ಮಾಹಿತಿ ಇಲ್ಲ: ಪ್ರಣಬ್
ಪ್ರಧಾನಿ ಹುದ್ದೆಯ ಆಕಾಂಕ್ಷೆ ಇಲ್ಲ: ಜಯಲಲಿತಾ
ಕಸಬ್ ಪರ ವಕೀಲೆ ಅಂಜಲಿ ಪದಚ್ಯುತಿ