ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಗಿಭದ್ರತೆಯಲ್ಲಿ ಮೊದಲ ಹಂತದ ಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಗಿಭದ್ರತೆಯಲ್ಲಿ ಮೊದಲ ಹಂತದ ಮತದಾನ ಆರಂಭ
ಹದಿನೈದನೆ ಲೋಕಸಭಾ ಚುನಾವಣೆಯಂಗವಾಗಿ ಪ್ರಥಮ ಹಂತದ ಮತದಾನ ಗುರುವಾರ ಮುಂಜಾನೆ ಆರಂಭಗೊಂಡಿದ್ದು ಬಿಗಿ ಭದ್ರತೆಯಲ್ಲಿ ಮತದಾನ ಆರಂಭಗೊಂಡಿದೆ. ಗುರುವಾರ, 15 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆ ಹಾಗೂ ಆಂಧ್ರಪ್ರದೇಶ ಹಾಗೂ ಒರಿಸ್ಸಾಗಳಲ್ಲಿ ವಿಧಾನಸಭಾ ಚುನಾವಣೆಗಳೂ ನಡೆಯುತ್ತಿವೆ.

15ನೆ ಲೋಕಸಭೆಗೆ ಐದು ಹಂತಗಳಲ್ಲಿ ಮತದಾನ ನಡೆಯಲಿದ್ದು, 124 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತಲಿದ್ದು, ಮುಂಜಾನೆ ಏಳು ಗಂಟೆಗೆ ಮತದಾನ ಆರಂಭಗೊಂಡಿದೆ.

1.85 ಲಕ್ಷ ಮತದಾನ ಕೇಂದ್ರಗಳಲ್ಲಿ 14.31 ಕೋಟಿಗಿಂತ ಅಧಿಕ ಮಂದಿ ಮತದಾನಕ್ಕೆ ಆರ್ಹತೆ ಪಡೆದಿದ್ದಾರೆ. ಸಾವಿರಾರು ಮಂದಿ ಭದ್ರತಾ ಸಿಬ್ಬಂದಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ಕೇರಳದ 20 ಸ್ಥಾನಗಳು, ಛತ್ತಿಸ್‌ಗಢದ 11 ಸ್ಥಾನಗಳು, ಮೇಘಾಲಯದ ಎರಡು, ಬಿಹಾರದ 13, ಉತ್ತರ ಪ್ರದೇಶದ 16, ಆಂಧ್ರಪ್ರದೇಶದ 22, ಜಾರ್ಖಂಡ್‌ನ 6, ಒರಿಸ್ಸಾದ 10, ಆಸ್ಸಾಮಿನ 3, ಅರುಣಾಚಲ ಪ್ರದೇಶದ 2, ಮಣಿಪುರ ಹಾಗೂ ಜಮ್ಮು ಕಾಶ್ಮೀರಗಳ ತಲಾ ಒಂದು ಕ್ಷೇತ್ರಗಳಲ್ಲಿ ಸಂಸದರ ಆಯ್ಕೆಯ ಚುನಾವಣೆ ನಡೆಯುತ್ತಿದ್ದರೆ, ಆಂಧ್ರದ 154 ಹಾಗೂ ಒರಿಸ್ಸಾದ 70 ಸ್ಥಾನಗಳಿಗೆ ವಿಧಾನಸಭಾ ಚುನಾವಣೆ ನಡೆಯುತ್ತಿದೆ.

122 ಮಹಿಳೆಯರು ಸೇರಿದಂತೆ ಕಣದಲ್ಲಿ ಒಟ್ಟು 1,715 ಅಭ್ಯರ್ಥಿಗಳಿದ್ದಾರೆ. ರೈಲ್ವೇ ಸಚಿವ ಆರ್‌ಜೆಡಿಯ ಲಾಲೂಪ್ರಸಾದ್ ಯಾದವ್, ಬಿಜೆಪಿಯ ಮುರಳಿ ಮನೋಹರ್ ಜೋಷಿ, ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್, ಕಾಂಗ್ರೆಸ್‌ ಪಕ್ಷದಿಂದ ಶಶಿ ಥರೂರ್ ಅವರ ಅದೃಷ್ಟ ಪರೀಕ್ಷೆ ಇಂದು ನಡೆಯುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೃಥ್ವಿ-2 ಕ್ಷಿಪಣಿಯ ಯಶಸ್ವಿ ಪ್ರಯೋಗ
ದೇಶಕ್ಕೆ ಅಡ್ವಾಣಿಯಂತಹ ನಾಯಕರು ಅಗತ್ಯ: ಅಟಲ್
ಪಾಕಿಸ್ತಾನದ ವಕೀಲರು ಬೇಕು: ಕಸಬ್
ಮಣಿರತ್ನಂ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಇಂಡೋ-ಪಾಕ್ ಪತ್ರಕರ್ತರ ಸಭೆಗೆ ರಾಮಸೇನೆ ಅಡ್ಡಿ
ಕಸಬ್ ತಾಯಿ ಭೇಟಿ ಕುರಿತು ಅಧಿಕೃತ ಮಾಹಿತಿ ಇಲ್ಲ: ಪ್ರಣಬ್