ಲೋಕಸಭಾ ಚುನಾವಣೆಗೆ ಭಂಗವುಂಟು ಮಾಡಲು ಟೊಂಕ ಕಟ್ಟಿರುವ ನಕ್ಸಲರು ಗುರುವಾರ ಮತ್ತೆ ಬಿಎಸ್ಎಫ್ ಸಿಬ್ಬಂದಿಗಳ ಬಸ್ ಮೇಲೆ ದಾಳಿ ನಡೆಸಿದ್ದು, ಐವರು ಬಿಎಸ್ಎಫ್ ಜವಾನರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಲಟೇಹರ್ ಜಿಲ್ಲೆಯಲ್ಲಿ ಸಂಭವಿಸಿದೆ.
ಸತ್ತವರಲ್ಲಿ ಒಬ್ಬ ಸಹಾಯಕ ಹಾಗೂ ಚಾಲಕನೂ ಸೇರಿದ್ದಾರೆ. ರಾಂಚಿಯಿಂದ ಸುಮಾರು 125 ಕಿಲೋಮೀಟರ್ ದೂರದಲ್ಲಿ ನೆಲಬಾಂಬು ಸ್ಫೋಟಿಸಿ ದಾಳಿ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸರವೇಂದು ತಥಾಗತ್ ಹೇಳಿದ್ದಾರೆ.
ಲಧುಪ್‌ನಿಂದ ಅರಾ ಎಂಬಲ್ಲಿ ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಮೇಲೆ ಮುಂಜಾನೆ ಸುಮಾರು ಏಳೂವರೆ ಗಂಟೆ ಸುಮಾರಿಗೆ ದಾಳಿ ನಡೆಸಲಾಗಿದೆ. ಸಿಬ್ಬಂದಿಗಳು ತಮ್ಮ ಗಸ್ತು ಕಾರ್ಯ ಮುಗಿಸಿ ಹಿಂತಿರುಗುತ್ತಿದ್ದರು.
ಬುಧವಾರವೂ ಮಾವೋವಾಗಿಗಳು ನೆಲಬಾಂಬು ಸಿಡಿಸಿ ನಡೆಸಿದ ದಾಳಿಯಲ್ಲಿ ಓರ್ವ ಚಾಲಕ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಐವರು ನಕ್ಸಲರು ಸಾವನ್ನಪ್ಪಿದ್ದರು.
ಒರಿಸ್ಸಾದಲ್ಲಿ ಮತಗಟ್ಟೆಗಳಿಗೆ ಬೆಂಕಿ ಒರಿಸ್ಸಾದಲ್ಲಿಯೂ ನಕ್ಸಲರು ಮತದಾನಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಒರಿಸ್ಸಾದಲ್ಲಿ ಮೂರು ಮತಗಟ್ಟೆಗಳಿಗೆ ಬೆಂಕಿಹಬಚ್ಚಿರುವ ನಕ್ಸಲರು ಅಲ್ಲಿ ಮತದಾನ ನಡೆಯದಂತೆ ಮಾಡಿದ್ದಾರೆ. ಅಲ್ಲದೆ, ಛತ್ತೀಸ್‌ಗಢದಲ್ಲಿಯೂ ಮತಗಟ್ಟೆಗೆ ಬೆಂಕಿ ಹಚ್ಚಿರುವುದಾಗಿ ವರದಿಯಾಗಿದೆ.
|