ಪತ್ರಿಕಾಗೋಷ್ಠಿಯೊಂದರಲ್ಲಿ ಗೃಹ ಸಚಿವ ಚಿದಂಬರಂ ಮೇಲೆ ಸಿಖ್ ಪತ್ರಕರ್ತನೊಬ್ಬ ಬೂಟೆಸೆದ ಘಟನೆ ಹಸಿಹಸಿಯಾಗಿರುವಾಗಲೇ, ಇದೀಗ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಅವರತ್ತ ಪಕ್ಷದ ಕಾರ್ಯಕರ್ತನೊಬ್ಬ ಚಪ್ಪಲಿ ಎಸೆದ ಘಟನೆ ವರದಿಯಾಗಿದೆ. ಇದರಿಂದಾಗಿ, ಚಪ್ಪಲಿ ಎಸೆಯುವ ಘಟನೆ ರಾಷ್ಟ್ರದಲ್ಲಿ ಸಾಂಕ್ರಾಮಿಕವಾಗತೊಡಗಿದೆ. ಮಧ್ಯಪ್ರದೇಶದ ಕಾಟ್ನಿಯಲ್ಲಿ ನಡೆಸಿದ ಚುನಾವಣಾ ರ‌್ಯಾಲಿಯಲ್ಲಿ ಕಾಟ್ನಿ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಪವಾಸ್ ಅಗರ್‌ವಾಲ್ ಎಂಬಾತ ಈ ಕೃತ್ಯ ನಡೆಸಿದ್ದಾನೆ ಎಂದು ಪ್ರಾಥಮಿಕ ವರದಿಗಳು