ಹದಿನೈದನೆ ಲೋಕಸಭೆಗೆ ಮೊದಲ ಹಂತದ ಚುನಾವಣೆ ನಡೆಯುತ್ತಿರುವಂತೆ, ನಕ್ಸಲ್ ಪೀಡಿತ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಚತ್ತೀಸ್‌ಗಢ ಮತ್ತು ಒರಿಸ್ಸಾವು ಹಿಂಸಾಚಾರದಲ್ಲಿ ನಲುಗುತ್ತಿದ್ದು, ಇದುವರೆಗೆ ಸುಮಾರು ಹತ್ತಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆದಿದ್ದು, ಐವರು ಬಿಎಸ್ಎಫ್ ಜವಾನರು, ಚುನಾವಣಾಧಿಕಾರಿಗಳು ಸೇರಿದಂತೆ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ.
ಈ ಮಧ್ಯೆ, ಬಿರುಸಿನ ಮತದಾನ ನಡೆಯುತ್ತಿದ್ದು ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಶೇ.30ರಷ್ಚು ಮತದಾನವಾಗಿದ್ದರೆ, ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಅಂದರೆ ಶೇ. 8ರಷ್ಟು ಮತದಾನ ದಾಖಲಾಗಿದೆ. 15 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯುತ್ತಿದೆ.
ಮತದಾನ ಆರಂಭವಾಗುತ್ತಿರುವಂತೆ ನಕ್ಸಲರು ಜಾರ್ಖಂಡ್‌ನಲ್ಲಿ ಬಿಎಸ್ಎಫ್ ಸಿಬ್ಬಂದಿಗಳ ವಾಹನದ ಮೇಲೆ ನೆಲಬಾಂಬ್ ದಾಳಿ ನಡೆಸಿದರು. ಈ ವೇಳೆ ಐವರು ಸಿಬ್ಬಂದಿಗಳು ಹಾಗೂ ಇತರ ಇಬ್ಬರು ಸಾವಿಗೀಡಾಗಿದ್ದರು.
ಛತ್ತೀಸ್‌ಗಢದ ರಾಜ್‌ನಂದ್‌ಗಾಂವ್ ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ವಾಹನವನ್ನು ಸ್ಫೋಟಿಸಿದದು ಈ ವೇಳೆ ಐವರು ಸಾವನ್ನಪ್ಪಿದ್ದೆರೆ, ಇತರ ಇಬ್ಬರು ಗಾಯಗೊಂಡಿದ್ದಾರೆ. ಅಲ್ಲದೆ ದಾಂತೇವಾಡ ನಾರಾಯಿನ್‌ಪುರ ಎಂಬಲ್ಲಿ ಮತಗಟ್ಟೆಗಳ ಮೇಲೆ ದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿದರು.
ಬಿಹಾರದಲ್ಲಿ ಚುನಾವಣಾ ಕರ್ತವ್ಯ ನಿರತರಾಗಿದ್ದ ಓರ್ವ ಹೋಂ ಗಾರ್ಡಾ ಹಾಗೂ ಚುನಾವಣಾ ಸಿಬ್ಬಂದಿಯನ್ನು ಗುಂಡುಟ್ಟು ಕೊಲ್ಲಲಾಗಿದೆ. |