ಐದನೆ ಹಾಗೂ ಅಂತಿಮ ಹಂತದ ಚುನಾವಣೆಗಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ. ಮೇ 13ರಂದು ನಡೆಯಲಿರುವ ಕೊನೆಯ ಹಂತದ ಚುನಾವಣೆಯಲ್ಲಿ ಒಂಬತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 86 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ತಮಿಳ್ನಾಡಿನ 39, ಉತ್ತರ ಪ್ರದೇಶದ 14, ಪಶ್ಚಿಮಬಂಗಾಳದ 11, ಪಂಜಾಬಿನ 9, ಉತ್ತರಕಾಂಡದ 5, ಹಿಮಾಚಲಪ್ರದೇಶದ 4, ಜಮ್ಮು ಕಾಶ್ಮೀರದ 2 ಹಾಗೂ ಚಂಡೀಗಢ ಹಾಗೂ ಪುದುಚೇರಿಯಲ್ಲಿ ತಲಾ ಒಂದೊಂದು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ರಾಷ್ಟ್ರಗಳ ಅಧಿಸೂಚನೆಯ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕಾ ಪ್ರಕ್ರಿಯೆ ಶುಕ್ರವಾರದಿಂದ ಆರಂಭಗೊಂಡು ಎಪ್ರಿಲ್ 24ರಂದು ಅಂತ್ಯಗೊಳ್ಳಲಿದೆ.
ತಮಿಳ್ನಾಡಿನ ಎಲ್ಲಾ 39 ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಯ ಒಂದು ಸ್ಥಾನಕ್ಕೆ ಕೊನೆಯ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದ್ದು, ಕೇಂದ್ರ ಸಚಿವ ಪಿ.ಚಿದಂಬರಂ ಅವರ ಅದೃಷ್ಟವೂ ಅಂದೇ ನಿರ್ಧಾರಗೊಳ್ಳಲಿದೆ. ಇದೇವೇಳೆ, ಬಿಜೆಪಿಯ ವಿವಾದಾಸ್ಪದ ಅಭ್ಯರ್ಥಿ ವರುಣ್ ಗಾಂಧಿ, ಅವರ ತಾಯಿ ಮನೇಕಾ ಗಾಂಧಿ, ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಮತ್ತು ಚಿತ್ರತಾರೆ ಜಯಪ್ರದ ಅವರುಗಳು ಸ್ಫರ್ಧಿಸುತ್ತಿರುವ ಕ್ಷೇತ್ರಗಳಲ್ಲೂ ಕೊನೆಯ ಹಂತದಲ್ಲಿ ಮತದಾನವಾಗಲಿದೆ.
ಮತಎಣಿಕೆಯು ಮೇ.16ರಂದು ನಡೆಯಲಿದೆ. |