ಮುಂಬೈದಾಳಿ ಕೋರ ಅಜ್ಮಲ್ ಅಮೀರ್ ಕಸಬ್‌ಗೆ ಯಾವುದೇ ಕಾನೂನು ಸಹಾಯ ಒದಗಿಸಬಾರದು ಎಂದು ಹೇಳಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಆತನ್ನು ಗೇಟ್ ವೇ ಆಫ್ ಇಂಡಿಯಾ ಬಳಿ ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದು ಹೇಳಿದ್ದಾರೆ.
ಕಸಬ್‌ಗೆ ಯಾಕಾಗಿ ಕಾನೂನು ಸಹಾಯ ಒದಸಬೇಕು ಎಂದು ಪ್ರಶ್ನಿಸಿದ ಅವರು "ಆತನನ್ನು ಮುಂಬೈಯ ಗೇಟ್ ವೇ ಆಫ್ ಇಂಡಿಯಾ ಬಳಿ ಬಹಿರಂಗವಾಗಿ ಗಲ್ಲಿಗೇರಿಸಬೇಕು ಎಂಬ ಸಾರ್ವಜನಿಕ ಒತ್ತಾಯವಿದೆ. ವಿಚಾರಣೆ ಮೂಲಕ ಸಮಯ ವ್ಯರ್ಥಮಾಡಬಾರದು" ಎಂದು ಹೇಳಿದ್ದಾರೆ.
ಅವರು ತಮ್ಮ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಸಬ್‌ನನ್ನು 'ಅತಿಥಿ'ಯಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿರುವ ಅವರು, ಆತನ ಭೇಟಿಗಾಗಿ ಆಗಮಿಸುತ್ತಿರುವ ಆತನ ತಾಯಿಯನ್ನು ಒಬ್ಬ ವೀರಮಾತೆಯಂತೆ ಪರಿಗಣಿಸಲಾಗುತ್ತಿದೆ" ಎಂದು ಟೀಕಿಸಿದ್ದಾರೆ.
ಕಸಬ್‌ನ ವಕೀಲರು ಸಾರ್ವಜನಿಕ ಆಕ್ರೋಶವನ್ನು ಅರಿತುಕೊಳ್ಳದೆ, ಪ್ರಕರಣದ ಮೂಲಕ ಪ್ರಸಿದ್ಧಿಗಳಿಸುತ್ತಾ ರಾಷ್ಟ್ರದ ಘನತೆಯೊಂದಿಗೆ ಆಟವಾಡುತ್ತಿದ್ದಾರೆ ಎಂದು ದೂರಿದ್ದಾರೆ. |