ಮುಂಬೈದಾಳಿ ಕುರಿತ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ಆರಂಭವಾಗಿದ್ದು, ಸರಕಾರಿ ವಕೀಲರು ಕಸಬ್ ವಿರುದ್ಧ ರಾಷ್ಟ್ರವಿರೋಧಿ ದಂಗೆಯ ಆರೋಪ ಹೊರಿಸಿದ್ದಾರೆ.
ಅಪರಾಧಿ ಸಂಚು, ರಾಷ್ಟ್ರದ ವಿರುದ್ಧ ಯುದ್ಧ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಅನೇಕ ಸೆಕ್ಷನ್‌ಗಳಡಿಯಲ್ಲಿ ಉಗ್ರ ಕಸಬ್ ವಿರುದ್ಧ ಆರೋಪ ಹೊರಿಸಲಾಗಿದೆ. ಏಳು ಪ್ರಕರಣದಲ್ಲಿ ಆತನನ್ನು ಪ್ರಧಾನ ಆರೋಪಿಯಾಗಿಸಿದ್ದರೆ, ಇತರ ಐದು ಪ್ರಕರಣದಲ್ಲಿ ಸಹ ಆರೋಪಿಯಾಗಿ ಹೆಸರಿಸಲಾಗಿದೆ.
ಅಮೆರಿಕ, ಬ್ರಿಟಿಷ್ ಹಾಗೂ ಇಸ್ರೇಲಿ ಪ್ರಜೆಗಳನ್ನು ನಿರ್ದಿಷ್ಟವಾಗಿ ಗುರಿಯಿರಿ ದಾಳಿ ನಡೆಸಬೇಕು ಎಂದು ಆತನನ್ನು ಈ ಕುಕೃತ್ಯಕ್ಕೆ ಬಳಸಿಕವುರ ಸ್ಪಷ್ಟ ಮಾಹಿತಿ ನೀಡಿದ್ದರು ಎಂದು ಸರಕಾರಿ ವಕೀಲರಾಗಿರುವ ಉಜ್ವಲ್ ನಿಕಾಮ್ ಹೇಳಿದ್ದಾರೆ.
ಭಾರತದ ವಿರುದ್ಧ ಯುದ್ಧಹೇರಿ ಜಮ್ಮು ಕಾಶ್ಮೀರವನ್ನು ವಶಪಡಿಸಿಕೊಳ್ಳುವುದು ಆತನ ಉದ್ದೇಶವಾಗಿದ್ದು ಎಂದು ಹೇಳಿದ ಅವರು ಕಸಬ್ ಪರ ವಕೀಲರ ವಾದವನ್ನು ತಳ್ಳಿಹಾಕುವಂತೆ ವಿಶೇಷ ನ್ಯಾಯಾಲಯವನ್ನು ವಿನಂತಿಸಿದರು. ಇದೇ ವೇಳೆ ಅವರು ಪಾಕಿಸ್ತಾನದ ಸೇನೆಯು ಈ ನರಮೇಧದ ಹಿಂದಿದೆ ಎಂದು ಅವರು ತನ್ನ ವಾದದಲ್ಲಿ ಹೇಳಿದ್ದಾರೆ.
ಕಸಬ್ ಬಾಲಾಪರಾಧಿ ಕಸಬ್ ಪರ ನೂತನವಾಗಿ ನೇಮಿಸಲಾಗಿರುವ ವಕೀಲ ಅಬ್ಬಾಸ್ ಖಾಜ್ಮಿ ಅವರು ತನ್ನ ಕಕ್ಷಿದಾರ ಕಸಬ್ ಒಬ್ಬ ಬಾಲಾಪರಾಧಿ ಎಂದು ಹೇಳಿದ್ದು, ಆತನ್ನು ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ವಿನಂತಿಸಿದರು. ಆದರೆ ಇವರ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದೆ. ಅಬ್ಬಾಸ್ ವಾದವನ್ನು ಬಲವಾಗಿ ವಿರೋಧಿಸಿದ ಸರ್ಕಾರಿ ವಕೀಲರು, ಕಸಬ್‌ಗೆ 21 ವರ್ಷ ಪ್ರಾಯವಾಗಿದೆ ಎಂದು ಸಮರ್ಥಿಸಿದರು. |