ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬೆಂಗಳೂರು ಸಿಲಿಕಾನ್ ಸಿಟಿಯನ್ನು ಹಿಂದಿಕ್ಕಲಿದೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು ಸಿಲಿಕಾನ್ ಸಿಟಿಯನ್ನು ಹಿಂದಿಕ್ಕಲಿದೆ
ರಾಜ್ಯದ ಅಭಿವೃದ್ಧಿಗೆ ಯುಪಿಎ ಸರ್ಕಾರ ನೀಡುತ್ತಿರುವ ಹಣವನ್ನು ಬಿಜೆಪಿ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ರಾಹುಲ್ ಗಾಂಧಿ ದೂರಿದರು. ಅವರು ಬೆಂಗಳೂರಿನ ಬಸವನ ಗುಡಿಯಲ್ಲಿರುವ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಬೆಂಗಳೂರು ನಗರವನ್ನು ಹಾಡಿ ಹೊಗಳಿದ ಅವರು ಇನ್ನು ಕೆಲವು ವರ್ಷಗಳಲ್ಲಿ ಬೆಂಗಳೂರು ಸಿಲಿಕಾನ್ ಸಿಟಿಯನ್ನು ಹಿಂದಿಕ್ಕಲಿದೆ ಎಂದರಲ್ಲದೆ, ಇದು ವಿಶ್ವವನ್ನು ಸಂಪರ್ಕಿಸುವ ನಾಡು ಎಂದು ಶ್ಲಾಫಿಸಿದರು. ಆದರೆ, ಇಲ್ಲಿರುವ ಸರ್ಕಾರವು ನಗರ ಎದುರಿಸುತ್ತಿರುವ ಮಾಲಿನ್ಯತೆ, ವಾಹನ ದಟ್ಟಣೆ, ರಸ್ತೆಗಳು ಹಾಗೂ ಸಾರಿಗೆ ಸಮಸ್ಯೆಯನ್ನು ಎದುರಿಸಲು ಕ್ರಮಕೈಗೊಂಡಿಲ್ಲ ಎಂದು ಅವರು ಖೇದವ್ಯಕ್ತ ಪಡಿಸಿದರು.

ಯುಪಿಎ ಸರ್ಕಾರವು ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ಮಂಜೂರು ಮಾಡಿದ್ದರೂ, ಇಲ್ಲಿನ ಸರ್ಕಾರ ಅದನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದರು. ನಾವು ಇನ್ನೂ ಬೆಂಗಳೂರಿಗೆ ಹಣ ಬಿಡುಗಡೆ ಮಾಡಲಿದ್ದೇವೆ. ಆದರೆ, ಅದನ್ನು ರಾಜ್ಯ ಸರ್ಕಾರವು ಸೂಕ್ತವಾಗಿ ಬಳಸಿಕೊಳ್ಳದು ಎಂಬುದು ತನಗೆ ತಿಳಿದಿದೆ. ಮತ್ತು ಅದರಲ್ಲಿ ಸ್ವಲ್ಪ ಹಣ ಮಾಯವಾಗಬಹುದು ಎಂಬುದನ್ನೂ ನಾನು ಈಗಲೇ ಹೇಳುತ್ತೇನೆ ಎಂದು ಅವರು ನುಡಿದರು

ಬಿಜೆಪಿಯು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಿದೆ. ಆದರೆ ರಾಜ್ಯದ ಭದ್ರತಾ ವಿಚಾರದ ಕುರಿತು ಚರ್ಚೆಗಾಗಿ ಗೃಹಸಚಿವ ಚಿದಂಬರಂ ಹಮ್ಮಿಕೊಂಡಿದ್ದ ಮೂರು ಸಭೆಗಳನ್ನೂ ನಿಮ್ಮ ಮುಖ್ಯಮಂತ್ರಿ ತಪ್ಪಿಸಿಕೊಂಡಿದ್ದರು ಎಂದು ನೆನಪಿಸಿದರು.

ಪ್ರಧಾನಿ ಮನಮೋಹನ್ ಸಿಂಗ್ ಅವರು ಭಯೋತ್ಪಾದನೆಯನ್ನು ಎದುರಿಸಲು ಸೂಕ್ತವಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ದೂರುತ್ತಿದೆ. ಆದರೆ ಕಾಂಧಹಾರ್ ವಿಮಾನ ಅಪಹರಣದ ವೇಳೆ ಅಧಿಕಾರದಲ್ಲಿದ್ದ ಎನ್‌ಡಿಎ ಸರ್ಕಾರದ ಸಚಿವರೇ ಉಗ್ರನ್ನು ವಿಮಾನದಲ್ಲಿ ಕರೆದೊಯ್ದು ಬಿಟ್ಟು ಬಂದರು. ಅದೇ ಉಗ್ರರು ಮತ್ತೆ ಬಂದು ಸಂಸತ್ತಿನ ಮೇಲೆ ದಾಳಿ ನಡೆಸಿದರು. ಈ ಬಗ್ಗೆ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಯಾರು ದುರ್ಬಲರು ಎಂಬುದನ್ನು ನೀವೇ ನಿರ್ಧರಿಸಿ ಎಂದು ಹೇಳಿದರು.

ಮಂಗಳೂರಿನ ಪಬ್ಬೊಂದರಲ್ಲಿ ಮಹಿಳೆಯರ ಮೇಲೆ ನಡೆದ ದಾಳಿಯನ್ನು ಪ್ರಸ್ತಾಪಿಸಿದ ಅವರು, ಈ ದೇಶದ ಸಂಸ್ಕೃತಿಯ ಬಗ್ಗೆ ಮಾತನಾಡುವವರ ಸಹ ಸಂಘಟನೆಗಳು ಮಹಿಳೆಯರ ಮೇಲೆ ದಾಳಿ ನಡೆಸುತ್ತಿವೆ ಎಂದು ಲೇವಡಿ ಮಾಡಿದರು. ಈ ದೇಶದ ಸಂಸ್ಕೃತಿಯಲ್ಲೇ ನಾನೂ ಹುಟ್ಟಿ ಬೆಳೆದಿದ್ದು ನನಗೂ ಈ ನೆಲದ ಸಂಸ್ಕೃತಿ ತಿಳಿದಿದೆ. ಮಹಿಳೆಯರನ್ನು ಥಳಿಸುವುದು ನಮ್ಮ ಸಂಸ್ಕೃತಿಯೇ ಎಂದು ಅವರು ಪ್ರಶ್ನಿಸಿದರು.

ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಎಸ್ಸೆಂ ಕೃಷ್ಣ, ಜಾಫರ್ ಶರೀಫ್, ಕೃಷ್ಣ ಭೈರೇಗೌಡ, ಡಿ.ಕೆ. ಶಿವಕುಮಾರ್ ಹಾಗೂ ಮತ್ತಿತರು ಸಮಾವೇಶದಲ್ಲಿ ಹಾಜರಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರವಿರೋಧಿಗಳ ವಿರುದ್ಧ ಧ್ವನಿಎತ್ತಿಯೇ ಸಿದ್ಧ: ವರಣ್
ಶಾಲಾ ಶಿಕ್ಷೆಯಿಂದಾಗಿ ಸಾವನ್ನಪ್ಪಿದ ಪುಟ್ಟ ಬಾಲಕಿ
ಕಸಬ್ ಮೇಲೆ ರಾಷ್ಟ್ರದ ವಿರುದ್ಧ ದಂಗೆ ಆರೋಪ
100ದಿನಗಳೊಳಗೆ ಕಪ್ಪು ಹಣ ಭಾರತಕ್ಕೆ: ಆಡ್ವಾಣಿ
ಕಸಬ್‌ನನ್ನು ಬಹಿರಂಗವಾಗಿ ಗಲ್ಲಿಗೇರಿಸಿ: ಠಾಕ್ರೆ
5ನೆ ಹಂತದ ಚುನಾವಣೆಗೆ ಅಧಿಸೂಚನೆ