ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಕೀಲರ ಬಲ: ಒತ್ತಡದಿಂದ ತಪ್ಪೊಪ್ಪಿಕೊಂಡೆನೆಂದ ಕಸಬ್!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಕೀಲರ ಬಲ: ಒತ್ತಡದಿಂದ ತಪ್ಪೊಪ್ಪಿಕೊಂಡೆನೆಂದ ಕಸಬ್!
ನೂರಾರು ಜನರ ಸಾವಿಗೆ ಕಾರಣವಾದ ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಏಕೈಕ ಪಾಕಿಸ್ತಾನಿ ಉಗ್ರಗಾಮಿ ಅಜ್ಮಲ್ ಕಸಬ್ 'ನಾನು ಈ ಕೃತ್ಯ ಎಸಗಿಲ್ಲ, ನನ್ನ ಬಾಯಲ್ಲಿ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಕೊಡಿಸಲಾಗಿದೆ' ಎಂದು ಹೇಳುವ ಮೂಲಕ, ಹೊಸ ವಕೀಲನ ನೇಮಕಾತಿಯೊಂದಿಗೆ ಆತನ ವಿಚಾರಣೆ ಪ್ರಕ್ರಿಯೆ ಭರ್ಜರಿಯಾಗಿಯೇ ಶುಕ್ರವಾರ ಆರಂಭವಾಗಿದೆ.

ಅಂಜಲಿ ವಾಘ್ಮೋರೆ ಸ್ಥಾನದಲ್ಲಿ ನ್ಯಾಯಾಲಯವು ಕಸಬ್ ಪರ ವಾದಿಸಲು ಎಸ್.ಜಿ.ಅಬ್ಬಾಸ್ ಕಾಜ್ಮಿಯನ್ನು ನೇಮಿಸಿದ ಬಳಿಕ ಶುಕ್ರವಾರ ವಿಚಾರಣೆ ಆರಂಭಗೊಂಡಿದ್ದು, ಉಗ್ರಗಾಮಿ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸೇನೆಯು ತನಗೆ ಮತ್ತು ಇತರ ಉಗ್ರಗಾಮಿಗಳಿಗೆ ತರಬೇತಿ ನೀಡಿದೆ ಎಂಬುದರ ಕುರಿತಾಗಿ ಇರುವ ಸುಳಿವು ಮತ್ತು ಮ್ಯಾಜಿಸ್ಟ್ರೇಟ್ ಎದುರು ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಲು ಕಸಬ್ ಬಯಸಿರುವುದಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು.

ಪೊಲೀಸರ 'ಒತ್ತಡ'ದಿಂದಾಗಿ ಈ ಹೇಳಿಕೆ ನೀಡಿರುವುದರಿಂದ ಕಸಬ್ ಅದನ್ನು ಹಿಂತೆಗೆದುಕೊಳ್ಳಲು ಇಚ್ಛಿಸಿರುವುದಾಗಿ ಕಾಜ್ಮಿ ಅವರು ನ್ಯಾಯಾಧೀಶ ಎಂ.ಎಲ್.ತಹಲ್ಯಾನಿ ಅವರಿಗೆ ತಿಳಿಸಿದರು.

ಈ ವಿಷಯದ ಕುರಿತು ನ್ಯಾಯಾಲಯ ಇನ್ನಷ್ಟೇ ತೀರ್ಪು ನೀಡಬೇಕಿದೆ. ಆದರೆ ತಾನು ಅಪ್ರಾಪ್ತ ವಯಸ್ಕ ಮತ್ತು 21 ವರ್ಷಕ್ಕಿಂತ ಕೆಳಗಿನವ ಮತ್ತು ಬಾಲಾಪರಾಧ ನ್ಯಾಯ ಕಾಯಿದೆಯ ಅಡಿಯಲ್ಲಿ ವಿಚಾರಣೆ ನಡೆಸಬೇಕೆಂಬ ಕಸಬ್ ಮನವಿಯನ್ನು ನ್ಯಾಯಾಲಯ ತಳ್ಳಿ ಹಾಕಿತು.

ಕಸಬ್ ಈ ಹಿಂದೆ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಓದಲಾಯಿತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರು ತಮ್ಮ ವಾದ ಮಂಡಿಸುತ್ತಾ, ತಪ್ಪೊಪ್ಪಿಗೆ ಹೇಳಿಕೆಯಲ್ಲಿದ್ದ ಅಂಶಗಳನ್ನು ಉಲ್ಲೇಖಿಸಿದರಾದರೂ ಪಾಕಿಸ್ತಾನಿ ಸೇನೆ ಮತ್ತು ಗುಪ್ತಚರ ಪಡೆಯ ಹೆಸರನ್ನು ನೇರವಾಗಿ ಪ್ರಸ್ತಾಪಿಸಲಿಲ್ಲ. ಬದಲಾಗಿ ಅದರಲ್ಲಿರುವಂತೆ ಜಮ್ಮು ಮತ್ತು ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಉದ್ದೇಶದೊಂದಿಗೆ ಪಾಕಿಸ್ತಾನದ ಲಷ್ಕರ್ ಇ ತೋಯಿಬಾ ಸಂಘಟನೆಯ ಸಂಚಿನ ಭಾಗವಿದು ಎಂದರಲ್ಲದೆ 'ಮೇಜರ್ ಜನರಲ್ ಸಾಹಬ್' ಮತ್ತು 'ಕರ್ನಲ್ ಆರ್.ಸಾದತ್' ಎಂಬ ಹೆಸರುಗಳನ್ನಷ್ಟೇ ಹೇಳಿದರು.

ಇಂದು ನ್ಯಾಯಾಲಯದಲ್ಲಿ ನಗು ನಗುತ್ತಾ ಇದ್ದ ಕಸಬ್, ತುಸು ಸಂತುಷ್ಟನಾದಂತೆ ಕಂಡುಬಂತು.

ಕಸಬ್ ಎರಡು ತಿಂಗಳ ಬಳಿಕ ತನ್ನ ಹೇಳಿಕೆ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾನೆ. ಈ ಹೇಳಿಕೆಗಳಿಗೆ ಪೊಲೀಸರ ಒತ್ತಡವಿರಲಿಲ್ಲ ಎಂದು ವಾದಿಸಿದ ನಿಕಮ್, ಇದನ್ನು ಸ್ವತಂತ್ರ ನ್ಯಾಯಾಂಗ ಅಧಿಕಾರಿಯಾಗಿರುವ ಮ್ಯಾಜಿಸ್ಟ್ರೇಟರೇ ದಾಖಲಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಗಮನ ಸೆಳೆದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದೇಶಿ ವಿದ್ಯಾರ್ಥಿನಿ ಅತ್ಯಾಚಾರ: ಮತ್ತಿಬ್ಬರ ಬಂಧನ
ಬೆಂಗಳೂರು ಸಿಲಿಕಾನ್ ಸಿಟಿಯನ್ನು ಹಿಂದಿಕ್ಕಲಿದೆ
ರಾಷ್ಟ್ರವಿರೋಧಿಗಳ ವಿರುದ್ಧ ಧ್ವನಿಎತ್ತಿಯೇ ಸಿದ್ಧ: ವರಣ್
ಶಾಲಾ ಶಿಕ್ಷೆಯಿಂದಾಗಿ ಸಾವನ್ನಪ್ಪಿದ ಪುಟ್ಟ ಬಾಲಕಿ
ಕಸಬ್ ಮೇಲೆ ರಾಷ್ಟ್ರದ ವಿರುದ್ಧ ದಂಗೆ ಆರೋಪ
100ದಿನಗಳೊಳಗೆ ಕಪ್ಪು ಹಣ ಭಾರತಕ್ಕೆ: ಆಡ್ವಾಣಿ