ಪ್ರಥಮ ಹಂತದ ಚುನಾವಣೆ ನಡೆದ ಏಳು ರಾಜ್ಯಗಳ 46 ಮತಗಟ್ಟೆಗಳಲ್ಲಿ ಶನಿವಾರ ಮರುಮತದಾನ ನಡೆಯುತ್ತಿದೆ. ಚುನಾವಣಾ ಆಯೋಗವು ಮರುಮತದಾನಕ್ಕೆ ನಿರ್ದೇಶನ ನೀಡಿದೆ.
ಆಂಧ್ರಪ್ರದೇಶದ 29 ಮತಕೇಂದ್ರಗಳು, ಅಸ್ಸಾಂ ಅರುಣಾಚಲ ಪ್ರದೇಶಗಳ ಐದು ಕೇಂದ್ರಗಳು ಹಾಗೂ ನಾಗಲ್ಯಾಂಡಿನ ಮೂರು, ಕೇರಳದ ಎರಡು ಹಾಗೂ ಉತ್ತರ ಪ್ರದೇಶ ಹಾಗೂ ಜಮ್ಮು ಕಾಶ್ಮೀರದ ತಲಾ ಒಂದು ಮತಗಟ್ಟೆಗಳಲ್ಲಿ ಮರುಮತದಾನ ನಡೆಯುತ್ತಿದೆ.
ನಕ್ಸಲರ ಹಿಂಸಾಚಾರಕ್ಕೆ ಒಳಗಾಗಿರುವ ಮಹಾರಾಷ್ಟ್ರದ ಗಡ್ಚಿರೋಲಿ, ಛತ್ತೀಸ್‌ಗಢ, ಬಿಹಾರ ಮತ್ತು ಒರಿಸ್ಸಾ ಹಾಗೂ ಉಗ್ರಗಾಮಿಗಳ ದಾಳಿಯಿಂದ ನಲುಗಿರುವ ಅಸ್ಸಾಮ್‌ಗಳಲ್ಲಿ ಚುನಾವಣಾಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳೊಂದಿಗೆ ಸುರಕ್ಷಿತವಾಗಿ ತಲುಪಿದ್ದಾರೆ ಎಂದು ಆಯೋಗ ತಿಳಿಸಿದೆ. |