ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಆಡ್ವಾಣಿಯವರನ್ನು ಟೀಕಿಸುವ ವೇಳೆ ಅಸಾಂವಿಧಾನಿಕ ಭಾಷೆಯನ್ನು ಬಳಸಿರುವ ಲಾಲೂ ಪ್ರಸಾದ್ ಯಾದವ್ ಅವರನ್ನು ತಕ್ಷಣವೇ ಕೇಂದ್ರ ಸಂಪುಟದಿಂದ ವಜಾ ಮಾಡಬೇಕು ಎಂದು ಬಿಜೆಪಿ ಶನಿವಾರ ಒತ್ತಾಯಿಸಿದೆ.
ಲಾಲೂ ಅವರು ಮಿತಿಮೀರಿ ತನ್ನ ನಾಲಿಗೆಯನ್ನು ಹರಿಬಿಡುತ್ತಾರೆ ಎಂದು ದೂರಿದ ಬಿಜೆಪಿ ವಕ್ತಾರ ಬಲ್ಬೀರ್ ಪಂಜ್ ಅವರು ದರ್ಬಾಂಗದಲ್ಲಿ ಚುನಾವಣಾ ಪ್ರಚಾರದ ವೇಳೆಗೆ ಸಭ್ಯತೆಯ ಎಲ್ಲೆಯನ್ನು ಮೀರಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಡ್ವಾಣಿ ಅವರನ್ನು ದೂರುವ ಭರದಲ್ಲಿ ಲಾಲೂ ಅಸಾವಿಂಧಾನಿಕ ಭಾಷೆ ಬಳಸಿದ್ದಾರೆ ಎಂದು ಹೇಳಲಾಗಿದೆ.
ಲಾಲೂ ಪ್ರಸಾದ್ ಯಾದವ್ ಅವರು ಈ ಹಿಂದ್ ವರುಣ್ ಮೇಲೆ ರೋಡ್ ರೋಲರ್ ಹರಿಸುತ್ತಿದ್ದೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು. ಮುಸ್ಲಿಮರ ವಿರುದ್ಧ ಅವಹೇಳನ ಮಾತುಗಳನ್ನು ಆಡಿರುವ ವರುಣ್ ವಿರುದ್ಧ ತಾನಾಗಿರುತ್ತಿದ್ದರೆ, ಯಾವ ಪರಿಣಾಗಳನ್ನು ಲೆಕ್ಕಿಸದೆ ವರುಣ್ ಮೇಲೆ ರೋಡ್ ರೋಲರ್ ಹರಿಸುತ್ತಿದ್ದೆ ಎಂದು ಹೇಳಿದ್ದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಶಬ್ದಗಳನ್ನು ಬಳಸಲು ಅವಕಾಶವಿಲ್ಲ. ಲಾಲೂರನ್ನು ಸಂಪುಟದಿಂದ ವಜಾ ಮಾಡಲು ಪ್ರಧಾನಿ ಸಿಂಗ್ ಅವರಿಗಿದು ಸಕಾಲ ಎಂದು ಪಂಜ್ ಹೇಳಿದ್ದಾರೆ.
ಈ ಕುರಿತು ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ನೀಡಲಿದ್ದೇವೆ ಎಂದ ಬಿಜೆಪಿ ನಾಯಕ ತಿಳಿಸಿದ್ದಾರೆ. ಆಯೋಗವು ವರುಣ್ ಗಾಂಧಿಯರ ವಿರುದ್ಧ ಕ್ರಮ ಕೈಗೊಂಡಿರುವಂತೆಯೇ ಲಾಲೂ ವಿರುದ್ಧವೂ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ಲಾಲು ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಆಯೋಗವು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. |