ವರುಣ್ ಗಾಂಧಿ ಪೆರೋಲ್ ಮೇಲೆ ಬಿಡುಗಡೆಗೊಂಡಿರುವುದಕ್ಕೆ ಬಿಜೆಪಿ ಮಾತ್ರ ಸಂತೋಷಪಡುತ್ತಿಲ್ಲ, ಬದಲಿಗೆ ವಿರೋಧ ಪಕ್ಷಗಳೂ ಸಂಭ್ರಮಿಸುತ್ತಿದ್ದಾರೆ. ಕಾರಣ ಎಂದರೆ, ಇದು ಕ್ಷೇತ್ರದಲ್ಲಿ ಅವರ ಮೇಲೆ ಹುಟ್ಟಿರುವ ಅನುಕಂಪವನ್ನು ಕೊನೆಗೊಳಿಸುತ್ತದೆ ಎಂಬುದು ವಿರೋಧಿಗಳ ಲೆಕ್ಕಾಚಾರ.
ವರುಣ್ ಅವರ ಬಿಡುಗಡೆಯಿಂದಾಗಿ ಅವರ ಪರವಾದ ಒಂದು ಅಲೆಗೆ ಪೆಟ್ಟುಬಿದ್ದಿದೆ ಎಂದು ವಿರೋಧಿಗಳು ಸಂತಸಗೊಂಡಿದ್ದಾರೆ. ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ ಸೇರಿದಂತೆ, ಪಕ್ಷಬೇಧವಿಲ್ಲದಂತೆ ಹರ್ಷ ವ್ಯಕ್ತಪಡಿಸಿದ್ದಾರೆ.
"ವರುಣ್ ಬಿಡುಗಡೆಯನ್ನು ನಾವು ಸ್ವಾಗತಿಸುವತ್ತೇವೆ. ಅವರು ಅನುಕಂಪದ ಮತಗಳನ್ನು ಗಳಿಸಲಾರರು. ಆತ ಜೈಲಿನಲ್ಲೇ ಇರುತ್ತಿದ್ದರೆ ಕೆಲವರು ಆತನ ಮೇಲಿನ ಅನುಕಂಪಕ್ಕಾಗಿ ಬಿಜೆಪಿಗೆ ಮತನೀಡುತ್ತಿದ್ದರು. ಆದರೆ ಇದೀಗ ಚಿತ್ರಣ ಬದಲಾಗುತ್ತದೆ" ಎಂದು ಪಿಲಿಭಿತ್‌ನಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ರಿಯಾಜ್ ಅಹ್ಮದ್ ಹೇಳಿದ್ದಾರೆ.
ಬಿಎಸ್ಪಿ ಅಭ್ಯರ್ಥಿ ಬುದ್ದಸೇನ್ ವರ್ಮಾರದ್ದೂ ಸಹ ಇದೇ ಅಭಿಪ್ರಾಯವಾಗಿದೆ. ಕಾಂಗ್ರೆಸ್‌ನ ವಿ.ಎಂ. ಸಿಂಗ್ ಅವರೂ ಸಹ ಈ ಅಭಿಪ್ರಾಯವನ್ನೇ ಅನುಮೋದಿಸುತ್ತಾರೆ. |