ಬಾಬರಿ ಮಸೀದಿ ಧ್ವಂಸಕ್ಕೆ ಬಿಜೆಪಿಯಷ್ಟೆ ಕಾಂಗ್ರೆಸ್ಸೂ ಸಹ ಹೊಣೆ ಎಂದಿರುವ ಲಾಲೂ ಪ್ರಸಾದ್ ಯಾದವ್ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಇದಕ್ಕೆ ತಮ್ಮಪಕ್ಷದ ಮೇಲೆ ಗೂಬೆ ಕೂರಿಸಲಾಗದು ಎಂದು ಹೇಳಿದ್ದಾರೆ.
"ನಮ್ಮನ್ನು ಜವಾಬ್ದಾರಿಯಾಗಿಸಲು ಸಾಧ್ಯವಿಲ್ಲ" ಎಂದು ಗುವಾಹತಿಯ ಅಮಿನ್ ಗಾಂವ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನುಡಿದರು.
ಹದಿನಾರನೆ ಶತಮಾನದ ಮಸೀದಿಯನ್ನು ರಕ್ಷಿಸುತ್ತೇನೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಹೊರತಾಗಿಯೂ ಅವರು ಮಸೀದಿ ಧ್ವಂಸಕ್ಕೆ ಜವಾಬ್ದಾರರಾಗಿದ್ದಾರೆ ಎಂದು ನುಡಿದರು.
"ಕಲ್ಯಾಣ್ ಸಿಂಗ್ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಬಾಬರಿ ಮಸೀದಿಯು ಸುರಕ್ಷಿತವಾಗಿರುವುದು ಎಂದು ಭರವಸೆ ನೀಡಿದ್ದ ಕಾರಣ ಕಾಂಗ್ರೆಸ್ ಅವರನ್ನು ನಂಬಲೇ ಬೇಕಿತ್ತು" ಎಂದು ಪ್ರಧಾನಿ ಸಿಂಗ್ ನುಡಿದರು.
ಆಡ್ವಾಣಿ ಹೇಳಿಕೆಗೆ ಪ್ರತಿಕ್ರಿಸುವುದಿಲ್ಲ ಬಿಜೆಪಿ ಮುಖಂಡ ಲಾಲೂಪ್ರಸಾದ್ ಯಾದವ್ ಅವರು ದುರ್ಬಲ ಪ್ರಧಾನಿ ಎಂದಿರುವುದಕ್ಕೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರಲ್ಲದೆ, ಈ ವಿಚಾರವನ್ನು ಇನ್ನಷ್ಟು ಹಿಂಜಲು ತಾನು ಇಷ್ಟಪಡುವುದಿಲ್ಲ ಎಂದು ನುಡಿದರು. |