ಕೆಳ ಅಸ್ಸಾಮಿನ ಸೋನಿತ್ಪುರ ಜಿಲ್ಲೆಯಲ್ಲಿ ಸೋಮವಾರ ನಸುಕಿನಲ್ಲಿ ಉಗ್ರರು ಹಾಗೂ ಸೇನಾಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರು ಸಾವನ್ನಪ್ಪಿದ್ದಾರೆ.
ರೆಡ್ ಹಾರ್ನ್ಸ್ ಪಡೆಯು ಎನ್‌ಡಿಎಫ್‌ಬಿ ಮತ್ತು ಎಂಯುಎಲ್ಟಿಎಯ ದಂಗೆಕೋರರು ಲೋಕ್ರಾದ ಆಗ್ನೇಯಕ್ಕೆ ಎಂಟು ಕಿಲೋಮೀಟರು ದೂರದಲ್ಲಿರುವ ಅಕಬಸ್ತಿ ಎಂಬಲ್ಲಿ ಉಗ್ರರೊಂದಿಗೆ ಗುಂಡಿನ ಕಾಳಗ ನಡೆಯಿತು ಎಂಬುದಾಗಿ ಸೇನಾ ಮೂಲಗಳು ತಿಳಿಸಿವೆ.
ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಚಕಮಕಿಯಲ್ಲಿ ನ್ಯಾಶನಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್‌ನ ಮೂರು ಮತ್ತು ಮುಸ್ಲಿಂ ಯುನೈಟೆಡ್ ಲಿಬರೇಶನ್ ಟೈಗರ್ಸ್ ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ.
ಐದು 9ಎಂಎಂ ಪಿಸ್ತೂಲುಗಳು, ಒಂದು ಚೀನ ಗ್ರೇನೆಡ್, ಐದು ಕೆಜಿ ಸ್ಫೋಟಕಗಳು, 10 ಡಿಟೋನೇಟರ್‌ಗಳು, 107 ಸುತ್ತಿನ ಮದ್ದುಗುಂಡುಗಳನ್ನು ಸತ್ತಿರುವ ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ. |